ಅಮಾನ್ಯ ನೋಟುಗಳನ್ನು ಬದಲಾಯಿಸಿ ನೀಡುವುದಾಗಿ ನಂಬಿಸಿ 75 ಲಕ್ಷ ರೂ. ಪಡೆದು ವಂಚನೆ: ಐದು ಮಂದಿ ವಿರುದ್ಧ ಕೇಸು
ಕಾಸರಗೋಡು: ವರ್ಷಗಳ ಹಿಂದೆ ಕೇಂದ್ರ ಸರಕಾರ ಅಮಾನ್ಯಗೊಳಿಸಿದ್ದ 1000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಬದಲಾಯಿಸಿ ಕೊಡುವ ಸಂಸ್ಥೆಯೊAದು ಕಾರ್ಯವೆಸಗುತ್ತಿದೆ ಎಂದು ಆ ಸಂಸ್ಥೆ ಅಮಾನ್ಯ ನೋಟುಗಳನ್ನು ನೀಡಿದ್ದಲ್ಲಿ ಕೋಟಿಗಟ್ಟಲೆ ರೂ.ಗಳ ಲಾಭ ಉಂಟಾಗಲಿದೆ ಎಂದು 57 ಲಕ್ಷ ರೂ. ಪಡೆದು ವಂಚನೆಗೈದ ದೂರಿನಂತೆ ಐದು ಮಂದಿ ವಿರುದ್ಧ ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಳ್ಳಿಕ್ಕೆರೆ ಮುಕ್ಕೋಟು ಕಾರಕುನ್ನಿನ ಬಿ.ಎಸ್. ವಿಲ್ಲಾದ ಇಬ್ರಾಹಿಂ ಬಾದುಶಾ (33) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪಳ್ಳಿಕ್ಕೆರೆ ಹದ್ದಾದ್ ನಗರದ ಸಮೀರ್ (ಟೈಗರ್ ಸಮೀರ್), ಕೋಟಪ್ಪಾರದ ಶರೀಫ್, ಗಿರಿ ಕೈಲಾಸ್ ಮತ್ತು ಕಂಡರೆ ಗುರುತು ಹಚ್ಚಲು ಸಾಧ್ಯವಾಗುವ ಇಬ್ಬರು ಸೇರಿದಂತೆ ಒಟ್ಟು ಐದು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
2023 ಜನವರಿ 15ರಿಂದ 2023 ಆಗಸ್ಟ್ 30ರ ಅವಧಿಯಲ್ಲಿ ಲಾಭದ ಭರವಸೆ ನೀಡಿ ಆದರೆ ತನ್ನಿಂದ ಹಣ ಪಡೆದು ವಂಚನೆ ಹೆಸರಲ್ಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಇಬ್ರಾಹಿಂ ಬಾದ್ಶಾ ತಿಳಿಸಿದ್ದಾನೆ.
ಶೆರೀಫ್ನ ಕೈವಶ 125 ಕೋಟಿ ರೂ. ಮೌಲ್ಯದ ಅಮಾನ್ಯಗೊಂಡ 1000 ರೂ. ನೋಟುಗಳಿವೆ ಎಂದು ನಂಬಿಸಿ ಸಮೀರ್ ತನ್ನನ್ನು ಸಂಪರ್ಕಿಸಿದ್ದನು. ಅಮಾನ್ಯ ಗೊಂಡ ನೋಟುಗಳನ್ನು ಬದಲಾಯಿಸಿ ನೀಡುವ ಪ್ರಧಾನ ಕಂಪೆನಿಯೊAದು ದಿಲ್ಲಿಯಲ್ಲಿ ಕಾರ್ಯವೆಸಗುತ್ತಿದೆ.
ಆ ಕಂಪೆನಿ ಮೂಲಕ ಅಮಾನ್ಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹಿಂದಕ್ಕೆ ಪಡೆದು, ಅದರ ಒಟ್ಟು ಮೌಲ್ಯದ ಶೇ. 60ರಷ್ಟು ಹಣವನ್ನು ನೀಡುತ್ತಿದೆ ಎಂದು ಆರೋಪಿ ಶಮೀರ್ ತಿಳಿಸಿದ್ದನು. ಆ ಕಂಪೆನಿಯವರು ಹಣ ಪಡೆದುಕೊಳ್ಳಲು ಬೇಕಲಕ್ಕೆ ಬರಬೇಕಾಗಿದ್ದಲ್ಲಿ ಅದಕ್ಕೆ ಆನ್ಲೈನ್ ಮೂಲಕ ಮುಂಗಡ ಬುಕ್ಕಿಂಗ್ ಮಾತ್ರವಲ್ಲ ಅದಕ್ಕಾಗಿ 15 ಲಕ್ಷ ರೂ.ವನ್ನು ಮುಂ ಗಡವಾಗಿ ಪಾವತಿಸಬೇಕೆಂದೂ, ಕಂಪೆನಿ ವಾಹನ ಇಲ್ಲಿಗೆ ಬಂದ ಒಂದು ಗಂಟೆಯೊಳಗಾಗಿ ಅಮಾನ್ಯ ನೋಟುಗಳನ್ನು ಆ ಕಂಪೆನಿಯವರಿಗೆ ನೀಡಿದ್ದಲ್ಲಿ ಅದರ ಬದಲು ಶೇ. 60ರಷ್ಟು ಮೌಲ್ಯದ ಹಣವನ್ನು ಅವರು ತಕ್ಷಣ ನಮ್ಮ ಕೈಗೆ ನೀಡುತ್ತಾರೆಂದು ಸಮೀರ್ ತನ್ನಲ್ಲಿ ತಿಳಿಸಿದ್ದನೆಂದು ದೂರುಗಾರ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾನೆ. ಮಾತ್ರವಲ್ಲ ಆ ಕಂಪೆನಿ ಕೇಂದ್ರ ಸಚಿವರೋ ರ್ವರ ಪುತ್ರನ ನಂಟು ಕೂಡಾ ಹೊಂದಿದೆ ಎಂದು ಆತ ತಿಳಿಸಿದ್ದನು. ಅದರಂತೆ ಹಿಂದಿ ಭಾಷೆ ಮಾತನಾಡುವ ಕೆಲವರು ವಾಹನದಲ್ಲಿ ಬಂದು ಅಮಾನ್ಯ ನೋಟುಗಳ ವೀಡಿಯೋ ದೃಶ್ಯ ಗಳನ್ನು ತೋರಿಸಿ ತನ್ನಿಂದ ಒಟ್ಟಾರೆ ಯಾಗಿ 57 ಲಕ್ಷ ರೂ. ಪಡೆದು ವಂಚಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಇಬ್ರಾಹಿಂ ಬಾದ್ಶಾ ಆರೋಪಿಸಿದ್ದಾನೆ. ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದಾರೆ.