ಅಮೃತಸರ ಗೋಲ್ಡನ್ ಟೆಂಪಲ್‌ನಲ್ಲಿ ಖಾಲಿಸ್ಥಾನ ಬೆಂಬಲಿಗನಿಂದ ಗುಂಡಿನ ದಾಳಿ; ಅಕಾಲಿದಳ ನಾಯಕ ಸುಖ್‌ಬೀರ್ ಸಿಂಗ್ ಬಾದಲ್‌ರ ಹತ್ಯೆಗೆ ಯತ್ನ

ಅಮೃತಸರ: ಪಂಜಾಬ್‌ನ ಅಮೃತ ಸರ ಗೋಲ್ಡನ್ ಟೆಂಪಲ್‌ನ ಪ್ರವೇಶ ದ್ವಾರದಲ್ಲಿ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್‌ರ ಮೇಲೆ ಖಾಲಿಸ್ಥಾನಿ ಬೆಂಬಲಿತ ದುಷ್ಕರ್ಮಿಯೋರ್ವ ಇಂದು ಬೆಳಿಗ್ಗೆ ಗುಂಡು ಹಾರಿಸಿ  ಹತ್ಯೆಗೈಯ್ಯಲೆತ್ನಿಸಿದ್ದಾನೆ. ಸುಖ್‌ಬೀರ್ ಸಿಂಗ್ ಬಾದಲ್ ಅವರು ಕೂದಲೆಳೆ ಅಂತರ ದಿಂದ ಪಾರಾಗಿದ್ದಾರೆ. ಸಿಖ್ ಸಂಪ್ರದಾಯದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ ಪಂಜಾಬ್‌ನ  ಗೋಲ್ಡನ್ ಟೆಂಪಲ್.

ಘಟನೆ ನಡೆದ ಬೆನ್ನಲ್ಲೇ ಅಲ್ಲಿದ್ದ ಜನರು ದಾಳಿಕೋರನನ್ನು ಹಿಡಿದು ಹಲ್ಲೆ ನಡೆಸಿದ್ದಾರೆ. ಬಳಿಕ ಪೊಲೀಸರು ಆಗಮಿಸಿ ಆತನನ್ನು ಹಿಡಿದು ಸಾಗಿಸಿ ದ್ದಾರೆ. ೬೨ ವರ್ಷದ ಸುಖ್‌ಬೀರ್ ಸಿಂಗ್ ಬಾದಲ್ ಪಂಜಾಬ್‌ನ ಮಾಜಿ ಉಪ ಮುಖ್ಯಮಂತ್ರಿಯಾಗಿದ್ದು, ಸಿಖ್ ಧರ್ಮಗ್ರಂಥ ‘ಗುರುಗ್ರಂಥ್ ಸಾಹೀಬ್’ ವನ್ನು  ಅಪಮಾನಿಸಿದ ವಿವಾದಿತ ಸಂತ ರಾಂ ರಹೀಂಗೆ  ಕ್ಷಮೆ ನೀಡಿದ್ದರು. ಆ ಕಾರಣಕ್ಕೆ ಸಿಖ್ ಧಾರ್ಮಿಕ ಮಂಡಳಿ ಅಖಾಲಿತಖ್ ನಿಂದ ಶಿಕ್ಷೆಗೊಳಗಾಗಿ ದ್ದರು. ಆ ದ್ವೇಷವೇ ಖಾಲಿ ಸ್ಥಾನಿ ಬೆಂಬಲಿಗ ಅವರ ಮೇಲೆ ಗುಂಡಿನ ದಾಳಿ ನಡೆಸಲು ಕಾರಣವೆಂದು ಹೇಳಲಾಗುತ್ತಿದೆ. ಶಿಕ್ಷೆಗೊಳಗಾದ ಸುಖ್‌ಬೀರ್ ಸಿಂಗ್  ಗೋಲ್ಡನ್ ಟೆಂಪಲ್ ಆವರಣದಲ್ಲಿ ಶಿಕ್ಷೆ ಪೂರೈಸಿದ್ದ ವೇಳೆಯಲ್ಲೇ ಇಂದು ಬೆಳಿಗ್ಗೆ ಅವರ ಮೇಲೆ ಈ ದಾಳಿ ನಡೆದಿದೆ.

RELATED NEWS

You cannot copy contents of this page