ಅಮೆರಿಕಾ ವಿಸಾ ಭರವಸೆ ನೀಡಿ ವಂಚನೆ: ಬಂಧಿತ ಆರೋಪಿ ವಿರುದ್ಧ ಮತ್ತೆ ದೂರುಗಳ ಮಹಾಪೂರ

ಕಾಸರಗೋಡು: ಅಮೆರಿಕಾ ದಲ್ಲಿ ಉದ್ಯೋಗ ವಿಸಾ ನೀಡು ವುದಾಗಿ ನಂಬಿಸಿ ಕೋಟಿಗಟ್ಟಲೆ ರೂ. ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಆರೋಪಿ  ಮೂಲತಃ ತಿರುವನಂತಪುರ ನಿವಾಸಿ ಹಾಗೂ ಈಗ ಚೆನ್ನೈಯಲ್ಲಿ ವಾಸಿಸು ತ್ತಿರುವ  ಜೋಸೆಫ್ ಡ್ಯಾನಿಯಲ್‌ನ ವಿರುದ್ಧ  ಮತ್ತೆ ಇಂತಹ ದೂರುಗಳ ಮಹಾಪ್ರವಾಹವೇ ಹರಿದುಬರ ತೊಡಗಿವೆ.

ಇದೇ ರೀತಿ ವಿಸಾ ನೀಡುವು ದಾಗಿ 1.93 ಲಕ್ಷ ರೂ. ವಡೆದು ತನ್ನನ್ನು  ವಂಚಿಸಿರುವುದಾಗಿ ದೂರಿ ಬಂದಡ್ಕ ಮಲಾಂಕುಂಡಿನ ಥೋಮಸ್ ವರ್ಗೀಸ್ ಎಂಬವರ ದೂರಿನಂತೆ ಬೇಡಗಂ ಪೊಲೀಸರು ಜೋಸೆಫ್ ಡ್ಯಾನಿಯಲ್ ವಿರುದ್ಧ ಪ್ರಕgಣ ದಾಖಲಿಸಿಕೊಂಡಿದ್ದಾರೆ. ಇದರ ಹೊರತಾಗಿ ರಾಜಪುರಂ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಹಾಗೂ ಅಂಬಲತ್ತರ ಪೊಲೀಸ್ ಠಾಣೆಯಲ್ಲೂ ಆತನ ವಿರುದ್ಧ ಕೇಸು ದಾಖಲಿಸಲ್ಪಟ್ಟಿವೆ. ಪಾಣತ್ತೂರಿನ ರಾಜು ಮ್ಯಾಥ್ಯು ಎಂಬವರ ಪತ್ನಿಗೆ ಅಮೇರಿಕಾ ಉದ್ಯೋಗ ವಿಸಾ ನೀಡುವುದಾಗಿ ನಂಬಿಸಿ 4.5 ಲಕ್ಷ ರೂ. ಪಡೆದು ಬಳಿಕ ವಂಚಿಸಿದ ದೂರಿನಂತೆ ಆರೋಪಿ ವಿರುದ್ಧ ರಾಜಪುರಂ ಪೊಲೀಸರು  ನಿನ್ನೆ ಮೊದಲ  ಪ್ರಕರಣ ದಾಖಲಿಸಿಕೊಂಡಿದ್ದರು. ಇದೇ ರೀತಿ ಆರೋಪಿ ಇತರ ಹಲವೆಡೆ ವಂಚನೆ ನಡೆಸಿದ ಬಗ್ಗೆ ಮಾಹಿತಿ ಲಭಿಸಿದ್ದು, ಅದರಿಂದ ಆತನ ವಿರುದ್ಧ ಇನ್ನೂ ದೂರುಗಳು ಲಭಿಸುವ ಸಾಧ್ಯತೆ ಇದೆಯೆಂದು ಪೊಲೀಸರು ತಿಳಿಸಿದ್ದಾರೆ.ಆರೋಪಿ ವಿರುದ್ಧ ಕಣ್ಣೂರು, ಇಡುಕ್ಕಿ, ಕೊಲ್ಲಂ ಮತ್ತು ಪಾಲ್ಘಾಟ್ ಜಿಲ್ಲೆಗಳಲ್ಲೂ ಇಂತಹ ಹಲವು ಪ್ರಕರಣಗಳು ದಾಖಲುಗೊಂಡಿವೆ

You cannot copy contents of this page