ಅಯರ್‌ಕ್ಕಾಡ್ ಶ್ರೀ ಧರ್ಮಶಾಸ್ತಾ ಮಂದಿರ ದೀಪೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಮುಳ್ಳೇರಿಯ: ಕಾರಡ್ಕ ಬಳಿಯ ಅಯರ್‌ಕ್ಕಾಡ್ ಶ್ರೀ ಧರ್ಮಶಾಸ್ತಾ ಮಂದಿರದ ೩೬ನೇ ವಾರ್ಷಿಕೋತ್ಸವ, ಶ್ರೀ ಅಯ್ಯಪ್ಪನ್ ದೀಪೋತ್ಸವದ ಆಮಂತ್ರಣ ಪತ್ರಿಕೆಯನ್ನು ಸನ್ನಿಧಿಯಲ್ಲಿ ಬಿಡುಗಡೆಗೊಳಿಸಲಾಯಿತು. ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿ, ಸಮಿತಿ ಗೌರವಾಧ್ಯಕ್ಷ ರಘುರಾಮ್ ಬಲ್ಲಾಳ್‌ರಿಗೆ ನೀಡಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಈ ವೇಳೆ ಮಂದಿರದ ಗುರುಸ್ವಾಮಿ ರವೀಂದ್ರನ್, ತಂಬಾನ್, ನಿತ್ಯಾನಂದ ಶೆಣೈ, ಎಸ್.ಎನ್. ಮಯ್ಯ, ಡಾ| ವಿ.ವಿ. ರಮಣ್, ನಾರಾಯಣ ಪೂಜಾರಿ, ಗಣೇಶ್ ವತ್ಸ, ರಂಗನಾಥ್ ರಾವ್, ಶಶಿಧರನ್, ವಿನೋದ್ ಕುಮಾರ್, ಮಾಧವನ್ ನಾಯರ್, ಪ್ರಸಾದ್, ಐತ್ತಪ್ಪ ಮವ್ವಾರು, ಸುಕುಮಾರನ್ ನಾಯರ್, ಜಗದೀಶ್ ರಾವ್ ಪೈಕಾನ, ವಿಜಯನ್ ಬಾಜಿರ್‌ತೊಟ್ಟಿ, ಕುಂಞಿರಾಮನ್ ಗುರುಸ್ವಾಮಿ, ಚಂದ್ರನ್ ಗುರುಸ್ವಾಮಿ, ಗೋಪಾಲನ್ ನಾಯರ್, ಸುಬ್ಬ ರಾವ್, ದೇವರಾಜ್ ಉಪಸ್ಥಿತರಿದ್ದರು. ಅಕ್ಷಿತ ಕೋಳಿಕ್ಕಜೆ ಪ್ರಾರ್ಥನೆ ಹಾಡಿದರು. ಚಂದ್ರನ್ ಕೋಳಿಕ್ಕಜೆ ಸ್ವಾಗತಿಸಿ, ಗೋಪಾಲಕೃಷ್ಣ ಮುಂಡೋಳುಮೂಲೆ ವಂದಿಸಿದರು.

RELATED NEWS

You cannot copy contents of this page