ಅರಣ್ಯದಲ್ಲಿ ಸಿಲುಕಿದ ಭಕ್ತರ ತಂಡದ ರಕ್ಷಣೆ

ಶಬರಿಮಲೆ: ಮಲೆ ಏರುತ್ತಿದ್ದ ಮಧ್ಯೆ ಅರಣ್ಯದಲ್ಲಿ ಸಿಲುಕಿಕೊಂಡ ಭಕ್ತರ ತಂಡವನ್ನು ಪೊಲೀಸರು ಹಾಗೂ ಎನ್‌ಡಿಆರ್‌ಎಫ್, ಅಗ್ನಿಶಾ ಮಕದಳ ಜಂಟಿಯಾಗಿ ರಕ್ಷಿಸಿದೆ. ತಮಿಳುನಾಡಿನಿಂದ ತಲುಪಿದ್ದ 17 ಮಂದಿಯಿದ್ದ ಭಕ್ತರ ತಂಡ ಪುಲ್ಲು ಮೇಡ್‌ನಿಂದ ಮೂರು ಕಿಲೋ ಮೀಟರ್ ದೂರದ ಕಯುದಕ್ಕುಳಿ ಎಂಬಲ್ಲಿ ಸಿಲುಕಿಕೊಂಡಿ ದ್ದರು. ಇವರಲ್ಲಿ ಗಾಯಗೊಂಡ ಮೂರು ಮಂದಿಯ ಪೈಕಿ ಇಬ್ಬರನ್ನು ಪ್ರಾಥಮಿಕ ಚಿಕಿತ್ಸೆ ನೀಡಿ ಬಿಡುಗಡೆ ಗೊಳಿಸಲಾಗಿದೆ. ಓರ್ವ ಈಗ ಸನ್ನಿಧಾನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.

You cannot copy contents of this page