ಅರಣ್ಯ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರ್ಷಕ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ

ಕುಂಬಳೆ:1961ರ ಅರಣ್ಯ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಕೇರಳದ ಕೃಷಿಕರಿಗೆ ಅನ್ಯಾಯ ಮಾಡಿದ ಪಿಣರಾಯಿ ವಿಜಯನ್ ಸರಕಾರದ  ವಿರುದ್ಧ ಕರ್ಷಕ ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಯಿತು.
 ಮಂಜೇಶ್ವರ ಬ್ಲಾಕ್ ಕರ್ಷಕ ಕಾಂಗ್ರೆಸ್ ನೇತೃತ್ವದಲ್ಲಿ ಕುಂಬಳೆಯಲ್ಲಿ ಜರಗಿದ ಪ್ರತಿಭಟನೆಯಲ್ಲಿ ತಿದ್ದುಪಡಿಯ ಕರಡು ಪ್ರತಿಯನ್ನು ದÀಹಿಸುವ ಮೂಲಕ ಚಾಲನೆ ನೀಡಲಾಯಿತು. ಕರ್ಷಕ ಕಾಂಗ್ರೆಸ್‌ನ ರಾಜ್ಯ ಕಾರ್ಯ ದರ್ಶಿ ಅಶೋಕ್ ಹೆಗಡೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಅರಣ್ಯ ಕಾಯ್ದೆಯ ತಿದ್ದು ಪಡಿಯು ಅಪಾಯಕಾರಿ ಹಾಗೂ ಜನ ವಿರೋಧಿಯಾಗಿದೆ, ರಾಜ್ಯದ ಎಡ ರಂಗ ಸರಕಾರ ಅರಣ್ಯ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ರಾಜ್ಯದಕೃಷಿಕರಿಗೆ ಅನ್ಯಾಯವ ನ್ನುಂಟು ಮಾಡಿದೆ ಎಂದು ಆರೋಪಿಸಿದರು.
ಮಂಜೇಶ್ವರ ಬ್ಲಾಕ್ ಕರ್ಷಕ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಣೇಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಪ್ರಧಾನ ಕಾರ್ಯದರ್ಶಿ ಸುಂದರ ಆರಿಕ್ಕಾಡಿ, ಹರ್ಷಾದ್ ವರ್ಕಾಡಿ, ಲೋಕನಾಥ ಶೆಟ್ಟಿ, ರಾಘ ವೇಂದ್ರ ಭಟ್, ರವಿ ಪೂಜಾರಿ, ವಸಂತ, ಸುಲೈಮಾನ್ ಊಜಂ ಪದವು, ಲಕ್ಷ್ಮಣ ಪ್ರಭು, ನಾಸರ್ ಮೊಗ್ರಾಲ್, ರಮೇಶ್ ಗಾಂಧಿನಗರ, ಕೇಶವ ದರ್ಬಾರ್ ಕಟ್ಟೆ, ಶ್ರೀಧರ ರೈ, ದಾಮೋದರ ಶೆಟ್ಟಿ,  ಶೇಖರ್ ದರ್ಬಾರ್ ಕಟ್ಟೆ, ನಾರಾಯಣ ಕಿದೂರು, ವಿಠಲ ಕುಲಾಲು, ಪದ್ಮನಾಭ, ಬಾಲಕೃಷ್ಣ ಶೆಟ್ಟಿ, ಉಮೇಶ್ ನಾಯ್ಕ್ ಭಾಗವಹಿಸಿ ದರು. ಸಲೀಂ ಪುತ್ತಿಗೆ ಸ್ವಾಗತಿಸಿ, ಪೃಥ್ವಿರಾಜ್ ಶೆಟ್ಟಿ ವಂದಿಸಿದರು.

You cannot copy contents of this page