ಅರಬಿ ಸಮುದ್ರದಲ್ಲಿ ಭಾರತೀಯ ಕೋಸ್ಟ್‌ಗಾರ್ಡ್ ಹೆಲಿಕಾಪ್ಟರ್ ಪತನ: ಮೂವರು ಸಿಬ್ಬಂದಿಗಳು ನಾಪತ್ತೆ

ನವದೆಹಲಿ:  ಇಬ್ಬರು ಪೈಲಟ್‌ಗಳು, ವಾಯುಪಡೆಯ ಇಬ್ಬರು  ಸಿಬ್ಬಂದಿಗಳನ್ನೊಳಗೊಂಡ ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಅಡ್ಮಾನ್ಡ್ ಲೈಟ್ ಹೆಲಿಕಾಫ್ಟರ್ ಗುಜರಾತ್ ಸಮೀಪದ ಪೋರಬಂದರ್ ಕರಾವಳಿಯ ಅರಬೀ ಸಮುದ್ರದಲ್ಲಿ ಪಥನಗೊಂಡಿದೆ.

ಹೆಲಿಕಾಫ್ಟರ್‌ನಲ್ಲಿದ್ದ ಓರ್ವ ಸಿಬ್ಬಂದಿ ಪತ್ತೆಯಾಗಿದ್ದು, ಉಳಿದ ಮೂವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವವರ ಪತ್ತೆಗಾಗಿ ಸಮುದ್ರದಾದ್ಯಂತ ವ್ಯಾಪಕ ಶೋಧ ನಡೆಸಲಾಗುತ್ತಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಸಮುದ್ರದಲ್ಲಿ ಹೆಲಿಕಾಫ್ಟರ್‌ನ ಅವಶೇಷಗಳು ಪತ್ತೆಯಾಗಿದೆ. ಹೆಲಿಕಾಫ್ಟರ್ ಹಡಗನ್ನು ಸಮೀಪಿಸುತ್ತಿದ್ದ ವೇಳೆ ಅದು  ಪಥನಗೊಂಡು ಸಮುದ್ರಕ್ಕೆ ಬಿದ್ದಿದೆ. ಐಸಿಜಿ ಶೋಧ ಕಾರ್ಯಾಚರಣೆಗಾಗಿ ನಾಲ್ಕು ಹಡಗುಗಳು ಮತ್ತು ಎರಡು ವಿಮಾನಗಳನ್ನು ಕಾರ್ಯಾಚರಣೆ ಗಿಳಿಸಲಾಗಿದೆ. 

ನಾಪತ್ತೆಯಾದವರಿ ಗಾಗಿ ವ್ಯಾಪಕ ಶೋಧ ನಡೆಸಲಾಗುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಫ್ಟರ್ ನಿಯಂತ್ರಣ  ತಪ್ಪಿ ಅಪಘಾತಕ್ಕೀ ಡಾಗಲು ಕಾರಣವಾಗಿದೆಯೆಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

You cannot copy contents of this page