ಅರವಣ ಪ್ರಸಾದ ವಿತರಣೆಯಲ್ಲಿ ನಿಯಂತ್ರಣ
ಪತ್ತನಂತಿಟ್ಟ: ಟಿನ್‌ನ ಕ್ಷಾಮದ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಅರವಣ ಪ್ರಸಾದ ವಿತರಣೆಗೆ ನಿಯಂತ್ರಣ ಹೇರಲಾಗಿದೆ. ಇದರಂಗವಾಗಿ ಇಂದಿನಿಂದ ಭಕ್ತರಿಗೆ ಐದು ಟಿನ್ ಅರವಣ ಪ್ರಸಾದ ಮಾತ್ರವೇ ಲಭಿಸಲಿದೆ. ಇಂದೇ ಹೆಚ್ಚುವರಿ ಟಿನ್‌ಗಳನ್ನು ಸನ್ನಿಧಾನಕ್ಕೆ ತಲುಪಿಸಲಾಗುವು ದೆಂದು ದೇವಸ್ವಂ ಬೋರ್ಡ್ ತಿಳಿಸಿದೆ. ನಿನ್ನೆ ಮಧ್ಯಾಹ್ನ ಅರವಣ ಪ್ರಸಾದ ನಿರ್ಮಾಣ ವನ್ನು ಮೊಟಕುಗೊಳಿಸಲಾಗಿತ್ತು. ಟಿನ್‌ಗಳ ಕೊರತೆ ಇದಕ್ಕೆ ಕಾರಣವೆನ್ನಲಾಗಿದೆ. ಕರಾರು ವಹಿಸಿಕೊಂಡ ಎರಡು ಕಂಪೆನಿಗಳಲ್ಲಿ ಒಂದು ಕಂಪೆನಿ ಸರಿಯಾದ ಸಮಯಕ್ಕೆ ಟಿನ್‌ಗಳನ್ನು ತಲುಪಿಸ ದಿರುವುದೇ ಈ ಸಂದಿಗ್ಧತೆಗೆ ಕಾರಣವೆನ್ನಲಾಗಿದೆ. ೩ ಲಕ್ಷ ಟಿನ್ ತಲುಪಿಸಬೇಕಾಗಿದ್ದು, ಆದರೆ ಇದರಲ್ಲಿ ಅರ್ಧದಷ್ಟು ಮಾತ್ರವೇ ಇಲ್ಲಿಗೆ ತಲುಪುತ್ತಿದೆ ಎಂದು ಹೇಳಲಾಗುತ್ತಿದೆ.