ಅರ್ಚಕ ನಿಧನ
ಬೋವಿಕಾನ: ಕಾನತ್ತೂರು ಪೂಂಗಾಲಕ್ಕಯ ನಿವಾಸಿ ಕೃಷಿಕ ಕೃಷ್ಣ ಭಟ್ (73) ನಿಧನ ಹೆಂದಿದರು. ಆರ್‌ಎಸ್‌ಎಸ್, ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿದ್ದ ಇವರು ಪಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಅರ್ಚಕರಾಗಿದ್ದರು. ಇತ್ತೀಚೆಗೆ ಬೆಂಗಳೂರಿನಲ್ಲಿ ಪುತ್ರನ ಮನೆಯಲ್ಲಿ ವಾಸಿಸುತ್ತಿದ್ದರು. ಮೃತರು ಪತ್ನಿ ಈಶ್ವರಿ, ಮಕ್ಕಳಾದ ಪೂರ್ಣಿಮಾ, ಆಶಾ, ಅರುಣ, ಈಶ್ವರ ಪ್ರಶಾಂತ, ಅಳಿಯಂದಿರಾದ ಸದಾಶಿವ ಬೆಳ್ಳಾರೆ, ಶಶಿಧರ ಕೂರ್ಲುಗಯ, ಮುಕುಂದರಾಜ ಸರಳಿ, ಸೊಸೆ ರಶ್ಮಿ, ಸಹೋದರರಾದ ವೆಂಕಟ್ರಮಣ ಭಟ್ ಬೆಂಗಳೂರು, ವಕೀಲ ಪಿ. ಈಶ್ವರ ಭಟ್ ಕಾಸರಗೋಡು, ನಾರಾಯಣ ಭಟ್ ಪೂಂಗಾಲಕ್ಕಯ, ಸಹೋದರಿಯರಾದ ಅದಿಥಿ, ವೆಂಕಟೇಶ್ವರಿ, ಸಾವಿತ್ರಿ, ತಿರುಮಲೇಶ್ವರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.