ಅರ್ಜುನ್‌ನ ಲಾರಿ ಮಾಲಕ ವಿರುದ್ಧ ಕುಟುಂಬ ಗಂಭೀರ ಆರೋಪ
ಕಲ್ಲಿಕೋಟೆ: ಲಾರಿ ಮಾಲಕ ಮನಾಫ್ ವಿರುದ್ಧ ಶಿರೂರಿನಲ್ಲಿ ಗುಡ್ಡೆ ಕುಸಿದು ಮಣ್ಣಿನಡಿಗೆ ಸಿಲುಕಿ ಮೃತಪಟ್ಟ ಅರ್ಜುನನ್‌ರ ಕುಟುಂಬ ಗಂಭೀರ ಆರೋಪ ಹೊರಿಸಿದೆ. ತಮ್ಮ ಹೆಸರಲ್ಲಿ ಹಲವೆಡೆಗಳಿಂದ ಹಣ ಸಂಗ್ರಹಿಸುತ್ತಿದ್ದು, ಈ ಕೃತ್ಯವನ್ನು ಮನಾಫ್ ನಿಲ್ಲಿಸಬೇಕೆಂದು ಕುಟುಂಬ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದೆ. ಅರ್ಜುನ್‌ರ ಸಾವನ್ನು ಮನಾಫ್ ಮಾರ್ಕೆಟಿಂಗ್ ನಡೆಸುತ್ತಿರುವುದಾಗಿ ಕುಟುಂಬ ಆರೋಪಿಸಿದೆ.
ಅರ್ಜುನ್‌ಗೆ ೭೫,೦೦೦ ರೂ. ವೇತನವಿತ್ತೆಂದು ಮನಾಫ್ ಸುಳ್ಳು ಪ್ರಚಾರ ನಡೆಸುತ್ತಿರುವುದಾಗಿಯೂ ಅವರು ದೂರಿದ್ದಾರೆ. ಈಶ್ವರ್ ಮಲ್ಪೆ ಹಾಗೂ ಮನಾಫ್ ಸೇರಿ ನಾಟಕವಾಡುತ್ತಿದ್ದುದಾಗಿಯೂ ಅವರು ಆರೋಪಿಸಿದ್ದಾರೆ. ನಮ್ಮೊಂದಿಗೆ ನಿಂತ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿರುವುದಾಗಿಯೂ, ಆದರೆ ನಮ್ಮನ್ನು ನೋಯಿಸುವಂತಹ ಕೆಲಸದಲ್ಲಿ ಯಾರೂ ತೊಡಗಬಾರದೆಂದು ಕುಟುಂಬ ಬೇಸರದಿಂದ ನುಡಿದಿದೆ.