ಅರ್ಜುನ್ ಕುಟುಂಬದ ದೂರು: ಮನಾಫ್ ವಿರುದ್ಧ ಕೇಸು ದಾಖಲಿಸದಿರಲು ಪೊಲೀಸ್ ನಿರ್ಧಾರ

ಕಲ್ಲಿಕೋಟೆ: ಕರ್ನಾಟಕದ ಶಿರೂರಿನಲ್ಲಿ ಸಂಭವಿಸಿದ  ಭೂಕುಸಿ ತದಲ್ಲಿ  ಮೃತಪಟ್ಟ ಕಲ್ಲಿಕೋಟೆ ನಿವಾಸಿ ಅರ್ಜುನ್‌ರ ಕುಟುಂಬ ದೂರು ನೀಡಿರುವುದು ಲಾರಿ ಮಾಲಕ ಮನಾಫ್ ವಿರುದ್ಧ ಅಲ್ಲವೆಂದು ಪೊಲೀಸರು ತಿಳಿಸಿ ದ್ದಾರೆ. ಮನಾಫ್‌ರ ಯೂಟ್ಯೂಬ್ ವೀಡಿಯೋದ ಕೆಳಗೆ ಹಾಗೂ  ಸಾಮಾಜಿಕ ಜಾಲತಾಣ ಗಳಲ್ಲಿ ಆಕ್ಷೇಪಕರ ರೀತಿಯ ಹೇಳಿಕೆ ನೀಡಿದವರ ವಿರುದ್ಧ ದೂರು ನೀಡಿರುವುದಾಗಿ ಅರ್ಜುನ್‌ರ ಕುಟುಂಬ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ. ಈ ಹಿಂದೆ ಕುಟುಂಬ ನೀಡಿದ ದೂರಿನಂತೆ ಮನಾಫ್‌ರನ್ನು ಪೊಲೀಸರು ಆರೋಪಪಟ್ಟಿಯಲ್ಲಿ ಸೇರಿಸಿದ್ದರು. ಇದೀಗ ಅರ್ಜುನ್‌ರ ಕುಟುಂಬ ನೀಡಿದ ಸ್ಪಷ್ಟೀಕರಣದ ಹಿನ್ನೆಲೆಯಲ್ಲಿ ಮನಾಫ್‌ರನ್ನು ಪ್ರಕರಣದಿಂದ ಹೊರತುಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಮನಾಫ್‌ರ ಯೂಟ್ಯೂಬ್ ಚ್ಯಾನೆಲ್ ಪರಿಶೀಲಿಸಿದಾಗ  ಅರ್ಜುನ್ ಅಥವಾ ಅವರ ಕುಟುಂಬವನ್ನು ದೂಷಿಸುವ ರೀತಿಯ ಯಾವುದೇ ವಿಷಯಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ತಿಳಿಸಲಾಗಿದೆ.  ಶಿರೂರಿನಲ್ಲಿ  ಜುಲೈ 16ರಂದು ಭೂಕುಸಿತ ಸಂಭವಿಸಿತ್ತು. ಈ ವೇಳೆ  ಲಾರಿ ಸಹಿತ ಚಾಲಕ ಅರ್ಜುನ್ (32) ನಾಪತ್ತೆಯಾಗಿ ದ್ದರು.  ಘಟನೆಯ 72  ದಿನಗಳ ಬಳಿಕ ಶಿರೂರಿನ ಗಂಗಾವಲಿ ಹೊಳೆಯಲ್ಲಿ ಅರ್ಜುನ್ ಹಾಗೂ ಲಾರಿಯನ್ನು ಪತ್ತೆಹಚ್ಚಲಾಗಿತ್ತು.

You cannot copy contents of this page