ಅರ್ಧ ಬೆಲೆಗೆ ಸಾಮಗ್ರಿಗಳ ಮಾರಾಟ: 231 ಕೋಟಿ ರೂ. ವಂಚನೆ: 1343 ಪ್ರಕರಣ ದಾಖಲು-ಮುಖ್ಯಮಂತ್ರಿ
ತಿರುವನಂತಪುರ: ಅರ್ಧ ಬೆಲೆಗೆ ಸಾಮಗ್ರಿಗಳನ್ನು ಮಾರಾಟ ಮಾಡಿ ವಂಚನೆ ನಡೆಸಿದುದಕ್ಕೆ ಸಂಬAಧಿಸಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳ ಲ್ಲಾಗಿ ಈತನಕ ಒಟ್ಟು 1343 ಪ್ರಕರ ಣಗಳನ್ನು ದಾಖಲಿಸಲಾಗಿದೆಯೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯ ನ್ ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಆಮೂಲಕ ಒಟ್ಟು 231 ಕೋಟಿ ರೂ.ಗಳ ವಂಚನೆ ನಡೆಸಲಾಗಿದೆ. ಇದಕ್ಕೆ ಸಂಬAಧಿಸಿ ಈತನಕ ದಾಖಲಿಸಲಾದ ಒಟ್ಟು 1343 ಕೇಸುಗಳ ಪೈಕಿ 665 ಕೇಸುಗಳ ತನಿಖೆಯನ್ನು ಕ್ರೈಂ ಪೊಲೀಸ್ ವಿಭಾಗಕ್ಕೆ ಹಸ್ತಾಂತರಿ ಸಲಾಗಿದೆ. ಒಟ್ಟು 48,384 ಮಂದಿ ಇಂತಹ ವಂಚನೆಗೊಳಗಾಗಿ ದ್ದಾರೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಈ ವಂಚನಾ ಪ್ರಕರಣದ ಪ್ರಧಾನ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಇವರ ಬ್ಯಾಂಕ್ ಖಾತೆಗಳ ವ್ಯವಹಾರಗಳನ್ನು ಸ್ಥಗಿತಗೊಳಿಸಲಾಗಿದೆ.
ಸೀಡ್ ಮೂಲಕ ಹಾಗೂ ಎನ್ಜಿಒ ಕಾನ್ಫೆಡರೇಶನ್ ಮೂಲಕ ಆರೋಪಿಗಳು ವಂಚನೆ ನಡೆಸಲಾಗಿದೆ. ಕೋ-ಆರ್ಡಿನೇಟರ್ಗಳಿಗೆ ಕಮಿಶನ್ ನೀಡುವ ಮೂಲಕ ಇಂತಹ ವಂಚನೆ ನಡೆಸಲಾಗಿದೆ. ಹೀಗೆ ನಡೆಸಲಾದ ವಂಚನೆಯಲ್ಲಿ ಯಾರಾದರೂ ರಾಜಕೀಯ ನೇತಾರರು ಶಾಮೀ ಲಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ತನಿಖೆ ತ್ವರಿತಗತಿಯಲ್ಲಿ ಸಾಗುತ್ತಿದೆ. ಈ ತನಿಖೆಗೆ ಸಂಬAಧಿಸಿ ಹಲವು ವಿಷಯಗಳು ಇನ್ನಷ್ಟೇ ಹೊರಬರಲು ಬಾಕಿ ಉಳಿದುಕೊಂಡಿದೆಯೆAದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಗಣ್ಯ ವ್ಯಕ್ತಿಗಳ ಜೊತೆ ಫೋಟೋ ತೆಗೆದು ಅದನ್ನು ನವ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿ ಆ ಮೂಲಕ ಜನರ ನಂಬುಗೆಯನ್ನು ಗಳಿಸುವಂತೆ ಮಾಡಿ ಇಂತಹ ವಂಚನೆ ನಡೆಸಲಾಗಿದೆ. ಜನರ ನಂಬುಗೆ ಪಡೆದುಕೊಳ್ಳಲು ಕೋ-ಆರ್ಡಿನೇಟರ್ಗಳನ್ನು ವಂಚನೆಗಾರರು ನೇಮಿಸಿದ್ದರು. ಈ ಯೋಜನೆಗೆ ಮೊದಲ ಹಂತದಲ್ಲಿ ಸೇರಿದವರಿಗೆ ಅರ್ಧ ಬೆಲೆಗೆ ಸ್ಕೂಟರ್ ಇತ್ಯಾದಿಗಳನ್ನು ನೀಡಲಾಗಿತ್ತು. ನಂತರ ವಂಚನೆ ಆರಂಭಿಸಲಾಗಿದೆಯೆAದು ಮುಖ್ಯಮಂತ್ರಿ ಹೇಳಿದ್ದಾರೆ.