ಅವಯವ ಮಾರಾಟಕ್ಕಾಗಿ ಅಮಾಯಕರನ್ನು ವಿದೇಶಕ್ಕೆ ಸಾಗಾಟ: ಕಾಸರಗೋಡು, ಮಂಗಳೂರು, ಕೊಚ್ಚಿ ಪ್ರಧಾನ ಕೇಂದ್ರಗಳು: ಓರ್ವ ಬಲೆಗೆ

ಕಾಸರಗೋಡು: ಅವಯವ ಮಾರಾಟ ಜಾಲ ರಾಜ್ಯದಲ್ಲಿ ಸಕ್ರಿಯವಾಗಿ ಕಾರ್ಯವೆಸಗುತ್ತಿದ್ದು ಇದರ ಮುಖ್ಯ ಸೂತ್ರಧಾರನನ್ನು ಕೊಚ್ಚಿ ಅಂತಾರಾಷ್ಟ್ರ ವಿಮಾನ ನಿಲ್ದಾಣದಿಂದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ತೃಶೂರು ನಿವಾಸಿ ಸಾಬೀತ್ ಎಂಬಾತ ಪೊಲೀಸರ ವಶಕ್ಕೊಳಗಾದ ಶಂಕಿತ ಆರೋಪಿಯಾಗಿದ್ದಾನೆ. ಕೇಂದ್ರ ಗುಪ್ತಚರ ವಿಭಾಗ ನೀಡಿದ ಮಾಹಿತಿ ಯಂತೆ  ಈತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈತ ವಿದೇಶಕ್ಕೆ ಹೋಗಲೆಂದು ವಿಮಾನ ನಿಲ್ದಾಣಕ್ಕೆ ಬಂ ದಿದ್ದನು.  ಕಾಸರಗೋಡು, ಮಂಗಳೂರು, ಕೊಚ್ಚಿ, ಲಾಂಚಿ, ಕೊಲ್ಕತ್ತ, ಜಮ್ಮು ಮತ್ತು ಮುಂಬೈ   ನಿವಾಸಿಗಳಾದ ಹಲವರು ಅವಯವ ಮಾರಾಟ ಜಾಲದ ಪ್ರಧಾನ ಕೊಂಡಿಗಳಾಗಿದ್ದಾರೆ. ಇವರು ಕಳೆದ ಮೂರು ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿದ್ದಾರೆ. ಹೈದರಾಬಾದ್‌ನನ್ನು ಕೇಂದ್ರೀಕರಿಸಿ ಇದರ ಪ್ರಧಾನ ಕೇಂದ್ರ ಕಾರ್ಯವೆಸಗುತ್ತಿದವುದಾಗಿ ಪೊಲೀಸರು ತಿಳಿಸಿದ್ದಾರೆ. ಅಮಾಯಕರನ್ನು ವಿವಿಧ   ರೀತಿಯ ಆಮಿಷಗಳನ್ನೊಡ್ಡಿ ಅದರ ಹೆಸರಲ್ಲಿ ನಕಲಿ ಆಧಾರ್ ಕಾರ್ಡ್, ಪಾಸ್‌ಪೋ ರ್ಟ್ ಇತ್ಯಾದಿಗಳನ್ನು ನಿರ್ಮಿಸಿ ವ್ಯಕ್ತಿಪಲ್ಲಟಗೊಳಿಸಿ ಅವರನ್ನು  ಇರಾನ್‌ಗೆ ಸಾಗಿಸಿ ಅಲ್ಲಿ ಅವರ  ಅಯವಗಳನ್ನು ತೆಗೆದು ಅವುಗಳನ್ನು ಮಾರಾಟ ಮಾಡುವುದು ಈ ಜಾಲದವರ ಪ್ರಧಾನ ದಂಧೆಯಾಗಿದೆ.

ಅವಯವ ನೀಡಲು ತಯಾರಾಗು ವವರಿಗೆ 10 ಲಕ್ಷ ರೂ. ಈ ಜಾಲದವರು ನೀಡುತ್ತಾರೆ. ಹೀಗೆ  ಓರ್ವವ್ಯಕ್ತಿಯನ್ನು ಇರಾನ್‌ಗೆ ಸಾಗಿಸಿದರೆ ಈ ಜಾಲದವರಿಗೆ ಅಲ್ಲಿಂದ 60 ಲಕ್ಷ ರೂ. ಲಭಿಸುತ್ತಿದೆಯೆಂ ಬುವುದು ತನಿಖೆಯಲ್ಲಿ  ಸ್ಪಷ್ಟಗೊಂಡಿದೆ ಯೆಂದು ಪೊಲೀಸರು ತಿಳಿಸಿದ್ದಾರೆ. ಆದ್ದರಿಂದ  ಈ ಪ್ರಕರಣದ ತನಿಖೆಯನ್ನು ಕಾಸರಗೋಡು, ಮಂಗಳೂರು ಮತ್ತಿತರೆ ಡೆಗಳಿಗೂ ಪೊಲೀಸರು ವಿಸ್ತರಿಸಿದ್ದಾರೆ.

ಹೀಗೆ ಈ ಜಾಲದ ಆಮಿಷಕ್ಕೊಳ ಗಾಗಿ ವಿದೇಶಕ್ಕೆ ಹೋದವರ ಪೈಕಿ ಹಲವರು ಇನ್ನೂ ಹಿಂತಿರುಗದೆ ಇದ್ದಾಗ ಅವರ ಮನೆಯವರು ಪೊಲೀಸರಿಗೆ  ದೂರು ನೀಡಿದ್ದಾರೆ. ಆ ಬಗ್ಗೆ ಇನ್ನೊಂದೆಡೆ ಕೇಂದ್ರ ಗುಪ್ತಚರ ವಿಭಾಗವೂ ಸಮಾನಾಂತರ ತನಿಖೆ ನಡೆಸಿದಾಗ ಅವಯವ ಮಾರಾಟ ಜಾಲದ ಬಗ್ಗೆ ಖಚಿತ ಮಾಹಿತಿ ಲಭಿಸಿದೆ.

Leave a Reply

Your email address will not be published. Required fields are marked *

You cannot copy content of this page