ಅವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ವಿರುದ್ಧ ಸ್ಕ್ವಾಡ್‌ನಿಂದ ದಂಡ ವಸೂಲಿ
ಕಾಸರಗೋಡು: ನಗರಸಭೆ ವ್ಯಾಪ್ತಿಯ ಕೋಟೆಕಣಿ ರಸ್ತೆಬದಿಯ ದ್ವಿ ಮಹಡಿ ಕಟ್ಟಡದಿಂದಿರುವ ಜೈವಿಕ-ಅಜೈವಿಕ ತ್ಯಾಜ್ಯವನ್ನು ಕಟ್ಟಡದ ಹಿಂಬದಿಯಲ್ಲಿ ರಾಶಿ ಹಾಕಿ ಪರಿಸರ ಹಾನಿಗೊಳಿಸಿರುವುದಕ್ಕೆ ಕಟ್ಟಡ ಮಾಲಕನಿಗೆ 5 ಸಾವಿರ ರೂ . ದಂಡ ಹೇರಲಾಯಿತು. ಕಾಂಪ್ಲೆಕ್ಸ್‌ನ ಒಳಗಿರುವ ಇಲೆಕ್ಟ್ರಿಕಲ್ಸ್, ಸ್ಟೋರ್ ಎಂಬೀ ಸಂಸ್ಥೆಗಳ ಮಾಲಕರಿಗೂ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಉಪೇಕ್ಷಿಸಿರುವುದಕ್ಕೆ ೫ ಸಾವಿರ ರೂ.ನಂತೆ ದಂಡ ಹಾಕಲಾಗಿದೆ. ವಿದ್ಯಾನಗರದ ಗೂಡಂಗಡಿಯಿಂದಿ ರುವ ತ್ಯಾಜ್ಯವನ್ನು ನಿರ್ಲಕ್ಷ್ಯವಾಗಿ ಉಪೇಕ್ಷಿಸಿರುವುದಕ್ಕೆ ಮಾಲಕನಿಂದ ೩ ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ತಪಾಸಣೆಯಲ್ಲಿ ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಲೀಡರ್ ಕೆ.ವಿ.ಮೊಹಮ್ಮದ್ ಮದನಿ, ಸದಸ್ಯ ಶೈಲೇಶ್ ಟಿ.ಸಿ, ಪಬ್ಲಿಕ್ ಹೆಲ್ತ್ ಇನ್‌ಸ್ಪೆಕ್ಟರ್‌ಗಳಾದ ರಚನಾ ಕೆ.ಪಿ, ಐಶ್ವರ್ಯ ಪಿ.ಪಿ, ದಿವ್ಯಶ್ರೀ ವಿ.ಪಿ, ಜಲೇಶ್ ಕೆ ಭಾಗವಹಿಸಿದರು.