ಅಸೌಖ್ಯ: ಒಂದೇ ದಿನ ಇಬ್ಬರು ಸಹೋದರರು ನಿಧನ
ಬೆಳ್ಳೂರು: ಸಹೋದರರಿಬ್ಬರ ಮರಣ ಸುಳ್ಯಪದವು ದೇವಸ್ಯ ಇಂದಾಜೆ ಪರಿಸರದಲ್ಲಿ ಶೋಕ ಸೃಷ್ಟಿಸಿದೆ. ಕೃಷಿಕರಾಗಿದ್ದ ಸುಬ್ರಹ್ಮಣ್ಯ ಭಟ್ (71) ನಿನ್ನೆ ಬೆಳಿಗ್ಗೆ ಸ್ವ-ಗೃಹದಲ್ಲಿ ನಿಧನ ಹೊಂದಿದ್ದರೆ, ರಾತ್ರಿ ವೇಳೆ ಇವರ ಸಹೋದರ ಶ್ರೀನಿವಾಸ ಭಟ್ (54)ರ ನಿಧನ ಸಂಭವಿಸಿದೆ. ಸುಬ್ರಹ್ಮಣ್ಯ ಭಟ್ ಅಲ್ಪ ಸಮಯದಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಇವರ ಸಹೋದರ ಶ್ರೀನಿವಾಸ ಭಟ್ ನ್ಯುಮೋನಿಯ ತಗಲಿ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಕಳೆದ 15 ದಿನದ ಹಿಂದೆ ಕಾಸರಗೋಡು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಹಿಂತಿರುಗಿದ್ದರು. ಆದರೆ ನಾಲ್ಕು ದಿನದ ಹಿಂದೆ ರೋಗ ಉಲ್ಬಣ ಗೊಂಡು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿ ಸಲಾಗಿತ್ತು. ನಿನ್ನೆ ರಾತ್ರಿ ಇವರು ನಿಧನರಾ ಗಿದ್ದಾರೆ. ಸುಬ್ರಹ್ಮಣ್ಯ ಭಟ್ ಆರ್‌ಎಸ್‌ಎಸ್ ಮುಖಂಡರಾಗಿದ್ದು, ಬೆಳ್ಳೂರು ಪಂಚಾಯತ್ ಮಾಜಿ ಉಪಾ ಧ್ಯಕ್ಷರಾಗಿದ್ದರು. ಬಿಜೆಪಿ ಬೆಳ್ಳೂರು ಪಂ ಚಾಯತ್ ಸಮಿತಿ ಮಾಜಿ ಅಧ್ಯಕ ರಾಗಿದ್ದ ಇವರು ಧಾರ್ಮಿಕ, ಸಾಮಾಜಿಕ ರಂಗಗಳಲ್ಲಿ ಸಕ್ರಿಯರಾಗಿದ್ದರು. ಸುಳ್ಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷರಾಗಿದ್ದರು.
ಮೃತ ಸುಬ್ರಹ್ಮಣ್ಯ ಭಟ್ ಪತ್ನಿ ಮಾಲತಿ, ಮಕ್ಕಳಾದ ಪ್ರತಿಭಾ, ಶೋಭಿತಾ ಹಾಗೂ ಮೃತ ಶ್ರೀನಿವಾಸ ಭಟ್ ಪತ್ನಿ ಜ್ಯೋತಿ (ಪಣಿಯ ಶಾಲೆ ಮುಖ್ಯೋಪಾಧ್ಯಾಯಿನಿ), ಮಕ್ಕಳಾದ ಶ್ರೀಕೇಶ, ಭಾಗ್ಯರನ್ನು ಅಗಲಿದ್ದಾರೆ. ಇವರಿಬ್ಬರು ಸಹೋದರರಾದ ಗಣಪತಿ ಭಟ್, ಕೃಷ್ಣ ಭಟ್ (ಮಧುರಾದಲ್ಲಿ ಸನ್ಯಾಸಿ), ಮಾಧವ ಭಟ್ (ನಿವೃತ್ತ ಅಧ್ಯಾಪಕ), ಶ್ರೀಪತಿ ಭಟ್ (ನಿವೃತ್ತ ಅಧ್ಯಾಪಕ),ಸಹೋದರಿ ಯರಾದ ರಾಧಾ, ಉಷಾರನ್ನು ಅಗಲಿದ್ದಾರೆ. ಇತರ ಇಬ್ಬರು ಸಹೋದರರು ಈ ಹಿಂದೆ ನಿಧನ ಹೊಂದಿದ್ದಾರೆ.