ಅಸೌಖ್ಯ: ಚಿಕಿತ್ಸೆಯಲ್ಲಿದ್ದ ಯುವತಿ ನಿಧನ

ಮುಳ್ಳೇರಿಯ: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಕಾರಡ್ಕ ಕೂಂಬಾಳೆ ಬಳಿಯ ಪಡಿಂಞ್ಞಾರಡ್ಕ ನಿವಾಸಿ ಯುವತಿ ಬಿ.ಸಾವಿತ್ರಿ (48) ನಿಧನಹೊಂದಿದರು. ಈ ಮೊದಲು ಕಾರಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತಾತ್ಕಾಲಿಕ ಕಂಪ್ಯೂಟರ್ ಅಧ್ಯಾಪಿಕೆಯಾಗಿದ್ದು, ಕರ್ಮಂತೋಡಿಯಲ್ಲಿ ಅಕ್ಷಯ ಕೇಂದ್ರವನ್ನು ನಡೆಸುತ್ತಿದ್ದರು.  ಇವರು ಕಳೆದ ಕೆಲವು ಸಮಯಗಳಿಂದ ಚಿಕಿತ್ಸೆಯಲ್ಲಿದ್ದರು. ರೋಗ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ನಿನ್ನೆ ಸಂಜೆ ನಿಧನ ಸಂಭವಿಸಿದೆ.

ಓಡಂಗಲ್ಲು ದಿ| ರಾಮ ಪಾಟಾಳಿ-ತೇಯಮ್ಮ ದಂಪತಿ ಪುತ್ರಿಯಾದ ಇವರು ಪತಿ ದಾಮೋದರನ್ ವಿ (ಬಿಎಸ್‌ಎಫ್ ಯೋಧ), ಏಕ ಪುತ್ರ ಸಂಕೀರ್ತ್, ಸಹೋದರ ಗಾಯಕ ರತ್ನಾಕರ ಓಡಂಗಲ್ಲು, ಸಹೋದರಿ ಶಾರದಾ ಮೀಪುಗುರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page