ಅಸೌಖ್ಯ ಬಾಧಿಸಿ ಯುವತಿ ಮೃತ್ಯು
ನೀರ್ಚಾಲು: ಕಿಡ್ನಿ ಸಂಬಂಧ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವತಿ ಅಸೌಖ್ಯ ಮೃತಪಟ್ಟ ಘಟನೆ ನಡೆದಿದೆ ಮಾಡತ್ತಡ್ಕದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಧೀರಜ್ ಎಂಬವರ ಪತ್ನಿ ಜ್ಯೋತಿ ಬಿ.ಎನ್. (27) ಮೃತಪಟ್ಟ ಯುವ ತಿ. ಅಲ್ಪ ಕಾಲದಿಂದ ಇವರಿಗೆ ಕಿಡ್ನಿ ಸಂಬಂಧ ಅಸೌಖ್ಯ ಬಾಧಿಸಿತ್ತೆನ್ನಲಾ ಗಿದೆ. ನಿನ್ನೆ ಇವರಿಗೆ ಅಸೌಖ್ಯ ಉಲ್ಬ ಣಗೊಂಡಿದ್ದು, ಇದರಿಂದ ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಬಂಬ್ರಾಣ ಚೂರಿತ್ತಡ್ಕ ಸಂತೋಷ್ ನಗರದ ದಿ| ನಾರಾಯಣ- ರುಕ್ಮಿಣಿ ದಂಪತಿಯ ಪುತ್ರಿಯಾದ ಮೃತರು ಸಹೋ ದರರಾದ ಜೀವನ್, ಜಿತೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.