ಅಸೌಖ್ಯ: ಮಹಿಳೆ ಆಸ್ಪತ್ರೆಯಲ್ಲಿ ನಿಧನ
ಉಪ್ಪಳ: ಧರ್ಮತ್ತಡ್ಕ ಗುಂಪೆ ನಿವಾಸಿ ದಿ| ರಾಮನಾಯ್ಕ್‌ರ ಪತ್ನಿ ಕಾವೇರಿ (91) ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಇವರನ್ನು ನಿನ್ನೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಮೃತರು ಮಕ್ಕಳಾದ ರತ್ನಾವತಿ, ಲಕ್ಷ್ಮಿ, ಶಾರದ, ಶಂಕರಿ, ಅಳಿಯ-ಸೊಸೆಯಂದಿರಾದ ರಾಮನಾಯ್ಕ್, ಈಶ್ವರ, ಸುಶೀಲ, ದೇವಕಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಕಾವೇರಿಯವರ ಇನ್ನೋರ್ವ ಪುತ್ರ ನಾರಾಯಣ ನಾಯ್ಕರ ಅಳಿಯಂದಿರಾದ ಐತ್ತಪ್ಪ, ನಾರಾಯಣ ಎಂಬಿವರು ಈ ಹಿಂದೆ ನಿಧನರಾಗಿದ್ದಾರೆ.