ಅಸ್ವಸ್ಥ ಸ್ಥಿತಿಯಲ್ಲಿದ್ದ ಬಿಜೆಪಿ ಮುಖಂಡ ನಿಧನ

ಮುಳಿಯಾರು: ಅಸ್ವಸ್ಥ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಬಿಜೆಪಿ ಮುಖಂಡ ಮೃತಪಟ್ಟರು. ಮುಳಿಯಾರು ಚಿಪ್ಲಿಕಯ ನಿವಾಸಿ ಹಾಗೂ ಬಿಜೆಪಿ ಮುಳಿಯಾರು ಮಂಡಲ ಸಮಿತಿ ಸದಸ್ಯ ಅಚ್ಯುತನ್ (63) ಮೃತಪಟ್ಟ ವ್ಯಕ್ತಿ. ಶನಿವಾರ ರಾತ್ರಿ ಇವರನ್ನು ಅಸ್ವಸ್ಥ ಸ್ಥಿತಿಯಲ್ಲಿ ಚೆರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಜೀವವುಳಿಸಲು ಸಾಧ್ಯವಾಗಲಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆ ಕಾಸರಗೋಡು ಜನರಲ್ ಪಂಚಾಯತ್ ಸಿಬ್ಬಂದಿಯಾಗಿ ನಿವೃತ್ತರಾಗಿದ್ದರು. ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತರಾಗಿದ್ದರು. ಮೃತರು ಪತ್ನಿ ಜಲಜಾಕ್ಷಿ, ಮಕ್ಕಳಾದ ಅಜಯ್ ಕುಮಾರ್, ಅಕ್ಷಯ್ ಕುಮಾರ್, ಸಹೋದರಿ ಕಾರ್ತ್ಯಾಯಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page