ಅಸ್ಸಾಂ,ಉತ್ತರಾಖಂಡದಲ್ಲಿ ಪ್ರಬಲ ಭೂಕಂಪ
ನವದೆಹಲಿ: ಅಸ್ಸಾಂ ಮತ್ತು ಉತ್ತರಾಖಂಡದಲ್ಲಿ ಇಂದು ಬೆಳಿಗ್ಗೆ ಪ್ರಬಲ ಭೂಕಂಪವುಂಟಾಗಿದೆ. ಅಸ್ಸಾಂನಲ್ಲಿ ರಿಕ್ಟರ್ ಮಾಪಕದಲ್ಲಿ 4.8ರಷ್ಟು ಭೂಕಂಪ ಸಂಭವಿಸಿದ್ದು, ಇದು ಆ ಪರಿಸರ ನಿವಾಸಿಗಳಲ್ಲಿ ಭೀತಿಯುಂಟುಮಾಡಿದೆ. ಆದರೆ ಹಾನಿ ಅಥವಾ ಸಾವು-ನೋವುಗಳ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಇದರ ಹೊರತಾಗಿ ನಿನ್ನೆ ಮಧ್ಯರಾತ್ರಿ ಈಶಾನ್ಯಪ್ರದೇಶದ ಕೆಲವು ಭಾಗಗಳಲ್ಲೂ ಭೂಕಂಪ ಸಂಭವಿಸಿದೆಯೆಂದು ರಾಷ್ಟ್ರೀಯ ಭೂಕಂಪಶಾಸ್ತ್ರಕೇಂದ್ರ ತಿಳಿಸಿದೆ.
ಉತ್ತರಾಖಂಡದ ಉತ್ತರಕಾಶಿ ಪ್ರದೇಶದಲ್ಲೂ ಇಂದು ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ ೩.೫ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವು 5 ಕಿ.ಮೀ ಆಳದಲ್ಲಿ ಸಂಭವಿಸಿದೆ ಯೆಂದು ಭೂಕಂಪ ಶಾಸ್ತ್ರ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿ ಉಂಟಾದ ವರದಿ ಲಭಿಸಿಲ್ಲವೆಂದು ಅವರು ತಿಳಿಸಿದ್ದಾರೆ.