ಆಟವಾಡುತ್ತಿದ್ದ ವೇಳೆ ಬಾವಿಗೆ ಬಿದ್ದು ಬಾಲಕ ಮೃತ್ಯು
ಕಾಸರಗೋಡು: ಆಟವಾಡುತ್ತಿದ್ದ ವೇಳೆ ಆಕಸ್ಮಾತ್ ಬಾವಿಗೆ ಬಿದ್ದು ಬಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಬೇಕಲಕ್ಕೆ ಸಮೀಪದ ಕುಣಿಯ ಹದಾದ್ ನಗರದ ಅಬ್ದುಲ್ ರಹ್ಮಾನ್ ಬಾಖಫಿ ಎಂಬವರ ಪುತ್ರ ಐದನೇ ತರಗತಿ ವಿದ್ಯಾರ್ಥಿ ಆಶಿಖ್ (೧೦) ಸಾವನ್ನಪ್ಪಿದ ದುರ್ದೈವಿ ಬಾಲಕ. ನಿನ್ನೆ ಸಂಜೆ ಈ ದುರ್ಘಟನೆ ನಡೆದಿದೆ.
ಈ ಬಾಲಕ ಆಟವಾಡುತ್ತಿದ್ದ ವೇಳೆ ಮನೆ ಪಕ್ಕದ ಬಾವಿಗೆ ಆಕಸ್ಮಾತ್ ಬಿದ್ದಿದ್ದಾನೆ. ಮನೆಯಿಂದ ಹೊರ ಹೋದ ಬಾಲಕ ಹಿಂತಿರುಗದೆ ಇರುವುದನ್ನು ಗಮನಿಸಿದ ಮನೆಯವರು ಹುಡುಕಾಟದಲ್ಲಿ ತೊಡಗಿದಾಗ ಬಾಲಕ ಬಾವಿಗೆ ಬಿದ್ದಿರುವುದನ್ನು ಕಂಡು ತಕ್ಷಣ ಆತನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಬಳಿಕ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ಬೇಕಲ ಪೊಲೀಸರು ತನಿಖೆ ನಡೆಸಿದರು.