ಆಟೋಚಾಲಕನಿಗೆ ಹಲ್ಲೆ: ಸಂಯುಕ್ತ ಸಮಿತಿಯಿಂದ ಪ್ರತಿಭಟನೆ
ಕಾಸರಗೋಡು: ನುಳ್ಳಿಪ್ಪಾಡಿ ಬಳಿ ಆಟೋರಿಕ್ಷಾವನ್ನು ತಡೆದು ನಿಲ್ಲಿಸಿ ಬೈಕ್ ಪ್ರಯಾಣಿಕ ಆಟೋ ಚಾಲಕನಿಗೆ ಹಲ್ಲೆ ನಡೆಸಿದ ಘಟನೆಯನ್ನು ಪ್ರತಿಭಟಿಸಿ ಸಂಯುಕ್ತ ಕಾರ್ಮಿಕರ ಮುಷ್ಕರ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ, ಸಾರ್ವಜನಿಕ ಸಭೆ ನಡೆಸಲಾಯಿತು. ಆಟೋ ಚಾಲಕ ಆದಂನನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿ ಆಟೋರಿಕ್ಷಾವನ್ನು ಹಾನಿಗೊಳಿಸಿರು ವುದಾಗಿ ದೂರಲಾಗಿದೆ. ಸಿಐಟಿಯು ಜಿಲ್ಲಾ ಜೊತೆ ಕಾರ್ಯದರ್ಶಿ ಎ.ಆರ್. ಧನ್ಯವಾದ್ ಪ್ರತಿಭಟನೆಯನ್ನು ಉದ್ಘಾಟಿಸಿದರು. ಎಸ್‌ಟಿಯು ರಾಜ್ಯ ಸಮಿತಿ ಸದಸ್ಯ ಸುಬೈರ್ ಅಧ್ಯಕ್ಷತೆ ವಹಿಸಿದರು. ಐಎನ್‌ಟಿಯುಸಿ ಮಂಡಲ ಅಧ್ಯಕ್ಷ ಸಿ.ಜೆ. ಟೋಮಿ, ಕೇಶವ, ಶಾಫಿ ಚಾಲಕುನ್ನು, ಎನ್. ರಾಮನ್ ಮಾತನಾಡಿದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಸ್ವಾಗತಿಸಿ, ಖಲೀಲ್, ಹರೀಂದ್ರನ್, ಉಮೇಶನ್, ಅಶೋಕನ್ ಪೆರುಂಬಳ, ಬಾಬು, ಯಾಕೂಬ್ ನೇತೃತ್ವ ನೀಡಿದರು.