ಆಟೋಚಾಲಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಹೊಸದುರ್ಗ: ಆಟೋಚಾಲಕ ರೊಬ್ಬರು ಮನೆಯೊಳಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪರಪ್ಪ ಪುಲಿಯಕುಳದ ಕುಮಾರನ್ ಎಂಬವರ ಪುತ್ರ ರಜೀಶ್ (33) ಮೃತ ವ್ಯಕ್ತಿ. ನಿನ್ನೆ ಮಧ್ಯಾಹ್ನ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಇವರನ್ನು ಕೂಡಲೇ ಕಾಞಂಗಾಡ್ ಜಿಲ್ಲಾಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಈ ಹಿಂದೆ ಇವರಿಗೆ ಡೆಂಗ್ಯು ಜ್ವರ ಬಾಧಿಸಿ ಚಿಕಿತ್ಸೆ ಪಡೆದಿದ್ದರು.ಮೃತರು ತಾಯಿ ಲಕ್ಷ್ಮಿ, ಸಹೋದರ ಸಹೋದರಿಯರಾದ ರತೀಶ್, ರಜಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.