ಆಟೋರಿಕ್ಷಾ ಚಾಲಕರ ಸಂಘಟನೆ ಸಿಐಟಿಯು ಪೈವಳಿಕೆ ಪಂಚಾಯತ್ ಮಟ್ಟದ ಸಭೆ
ಪೈವಳಿಕೆ: ಪೈವಳಿಕೆ ಪಂಚಾಯತ್ ಮಟ್ಟದ ಆಟೋರಿಕ್ಷಾ ಚಾಲಕರ ಸಂಘಟನೆ ಸಿಐಟಿಯುನ ಸಭೆ ಪೈವಳಿಕೆ ಆಜಾದ್ ನಗರದಲ್ಲಿ ಜರಗಿತು. ಸಂಘಟನೆಯ ಅಧ್ಯಕ್ಷ ಪವಿತ್ರ ಬಲ್ಲಾಳ್ ಅಧ್ಯಕ್ಷತೆ ವಹಿಸಿದರು. ಸಿಐಟಿಯು ಮಂಜೇಶ್ವರ ಏರಿಯಾ ಕಾರ್ಯದರ್ಶಿ ಪ್ರಶಾಂತ್ ಕನಿಲ ಉದ್ಘಾಟಿಸಿ ಮಾತ ನಾಡಿದರು. ಸಿಐಟಿಯು ನೇತಾರ ಚಂದ್ರ ನಾಕ್ ಮಾನಿಪ್ಪಾಡಿ, ಕ್ಷೇಮ ನಿಧಿಗಳ ಬಗ್ಗೆ ಸಂಘಟನೆಯ ಉದ್ದೇಶಗಳ ಬಗ್ಗೆ ವಿವರಿಸಿದರು.
ಸಿಪಿಎಂ ಪೈವಳಿಕೆ ಲೋಕಲ್ ಕಾರ್ಯದರ್ಶಿ ಅಬ್ದುಲ್ಲ ಕೆ. ಮಾತನಾಡಿದರು. ಎಲ್ಲಾ ಆಟೋರಿಕ್ಷಾ ಚಾಲಕರಿಗೂ ಸದಸ್ಯತನ ನೀಡಲು ತೀರ್ಮಾನಿಸಲಾಯಿತು. ಎಲ್ಲರನ್ನು ಕ್ಷೇಮನಿಧಿಗೆ ಸೇರಿಸಲು ತೀರ್ಮಾನಿಸ ಲಾಯಿತು. ಅಶ್ರಫ್ ಅಂಬಿಕಾನ, ಅಶ್ರಫ್ ಪೈವಳಿಕೆ, ಅಸೀಸ್ ಬೀಡುಬೈಲ್, ಅಸೀಸ್ ಪೈವಳಿಕೆ, ಹಾರಿಸ್, ಮುನೀರ್, ಮಹಮ್ಮದ್, ಜಯರಾಮ, ಜಮಾಲ್ ಅಬ್ದುಲ್ಲ, ಹಮೀದ್, ರಫೀಕ್, ಕಿಶೋರ್ ನೇತೃತ್ವ ನೀಡಿದರು. ಅಶ್ರಫ್ ಪೈವಳಿಕೆ ಸ್ವಾಗತಿಸಿ, ಅಸೀಸ್ ವಂದಿಸಿದರು.