ಆಟೋ ಚಾಲಕನನ್ನು ಕೊಲೆಗೈದು ಮೃತದೇಹ ಬಾವಿಗೆಸೆದ ಪ್ರಕರಣ: ಬಂಧಿತ ಆರೋಪಿಗೆ ರಿಮಾಂಡ್

ಮಂಜೇಶ್ವರ: ಕುಂಜತ್ತೂರು ಬಳಿಯ ಅಡ್ಕಪ್ಪಳ್ಳ ಮಾನಿಗುಡ್ಡೆ ಎಂಬಲ್ಲಿ   ಆಟೋ ಚಾಲಕನನ್ನು ಕೊಲೆಗೈದು ಮೃತದೇಹವನ್ನು ಬಾವಿಗೆ ಎಸೆದ   ಪ್ರಕರಣಕ್ಕೆ ಸಂಬಂಧಿಸಿ ಸೆರೆಗೀಡಾದ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.

ಮಂಗಳೂರು ಸುರತ್ಕಲ್ ಬಳಿಯ ಕಲ್ಲಾಪು ಎಂಬಲ್ಲಿನ ಅಭಿಷೇಕ್ ಶೆಟ್ಟಿ (25)  ರಿಮಾಂಡ್ ಗೊಳಗಾದ ಆರೋಪಿಯಾಗಿದ್ದಾನೆ.  ಈತನನ್ನು ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಇ. ಅನೂಪ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಸೆರೆಹಿಡಿದಿದ್ದಾರೆ.

ಮಂಗಳೂರು ಮುಲ್ಕಿ ಬಳಿಯ ಕೊಲ್ನಾಡು ನಿವಾಸಿಯೂ ಮಂಗಳೂ ರಿನಲ್ಲಿ ಆಟೋ ಚಾಲಕನಾಗಿರುವ ಮೊಹಮ್ಮದ್ ಶರೀಫ್ (52) ಎಂಬ ವರ ಸಾವಿಗೆ ಸಂಬಂಧಿಸಿ ಅಭಿ ಷೇಕ್ ಶೆಟ್ಟಿಯನ್ನು ಬಂಧಿಸಲಾಗಿದೆ. ಅಭಿಷೇಕ್ ಶೆಟ್ಟಿ ಶಾಲಾ ಬಸ್ ಚಾಲಕನಾಗಿದ್ದ ನೆನ್ನಲಾಗಿದೆ. ಈತನ  ಬಸ್‌ಗೆ ಸೈಡ್ ನೀಡದಿರುವುದು ಹಾಗೂ ಶಾಲಾ ಬಸ್‌ನಲ್ಲಿ ಕೆಲಸ ನಷ್ಟಗೊಂಡಿರುವ ಸಂಬಂಧ ಹುಟ್ಟಿಕೊಂಡ ದ್ವೇಷವೇ ಕೊಲೆಗೆ ಕಾರಣವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮೊಹಮ್ಮದ್ ಶರೀಫ್‌ರನ್ನು ಆರೋಪಿ ಅಭಿಷೇಕ್ ಶೆಟ್ಟಿ ಉಪಾಯದಿಂದ ಕುಂಜತ್ತೂರಿಗೆ ತಲುಪಿಸಿ ಕೊಲೆ ನಡೆಸಿದ್ದಾರೆಂದೂ ತನಿಖೆಯಲ್ಲಿ ತಿಳಿದುಬಂದಿದೆ.

ಮಂಜೇಶ್ವರ ಇನ್‌ಸ್ಪೆಕ್ಟರ್ ಇ. ಅನೂಪ್ ಕುಮಾರ್ ನೇತೃತ್ವದ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಘಟನೆಯ ನಾಲ್ಕು ದಿನಗಳೊಳಗೆ ಆರೋಪಿ ಯನ್ನು ಬಂಧಿಸಲು ಸಾಧ್ಯವಾಗಿದೆ. ತನಿಖೆಯಂಗವಾಗಿ ಮಂಗಳೂರಿಗೆ ಮರಳಿದ ಪೊಲೀಸರು ವಿವಿಧೆಡೆ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದರು. ಅಲ್ಲದೆ ಮಂಗಳೂರಿನ ಕೆಲವರಿಂದ ಮಾಹಿತಿ ಸಂಗ್ರಹಿಸಿಕೊಂಡಿದ್ದು ಈ ವೇಳೆ ಆರೋಪಿಯ ಕುರಿತಾಗಿ ಸುಳಿವು ಲಭಿಸಿತ್ತೆನ್ನಲಾಗಿದೆ.

ಮೊಹಮ್ಮದ್ ಶರೀಫ್ ಕಳೆದ ಗುರುವಾರ ಸಂಜೆ ಕುಂಜತ್ತೂರು ಮಾನಿಗುಡ್ಡೆಯ ಆವರಣವಿಲ್ಲದ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಾವಿಯ ಸಮೀಪ ಕರ್ನಾಟಕ ನೋಂದಾವಣೆಯ ಆಟೋ ರಿಕ್ಷಾ ಹೊಂಡದಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿತ್ತು. ಬಾವಿ ಸಮೀಪ ರಕ್ತಮಿಶ್ರಿತ ಬಟ್ಟೆ, ಚಪ್ಪಲಿ, ಪರ್ಸ್ ಕಂಡುಬಂದಿತ್ತು. ನಾಗರಿಕರು ನೀಡಿದ ಮಾಹಿತಿ ಮೇರೆಗೆ ಮಂಜೇಶ್ವರ ಪೊಲೀಸರು ತಲುಪಿ ಪರ್ಸ್ ಪರಿಶೀಲಿಸಿದಾಗ ಮೊಹಮ್ಮದ್ ಶರೀಫ್‌ರ  ಕುರಿತಾಗಿ ಮಾಹಿತಿ ಲಭಿಸಿದೆ. ಇದರಂತೆ ಮಂಜೇಶ್ವರ ಪೊಲೀಸರು ಮುಲ್ಕಿ ಪೊಲೀಸರನ್ನು ಸಂಪರ್ಕಿಸಿದಾಗ ಮೊಹಮ್ಮದ್ ಶರೀಫ್ ನಾಪತ್ತೆಯಾದ ಬಗ್ಗೆ ಕೇಸು ದಾಖಲಿಸಿದ ವಿಷಯ ತಿಳಿದುಬಂದಿದೆ. ಶುಕ್ರವಾರ ಬೆಳಿಗ್ಗೆ ಮೃತದೇಹ ಮೇಲಕ್ಕೆತ್ತಿ ಪರಿಶೀಲಿಸಿದಾಗ ದೇಹದಲ್ಲಿ ಇರಿತದ ಗಾಯಗಳು ಕಂಡುಬಂದಿದೆ. ಪರಿಯಾರಂ ಮೆಡಿಕಲ್  ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮರ ಣೋತ್ತರ ಪರೀಕ್ಷೆಯಲ್ಲಿ ಕೊಲೆಕೃತ್ಯವೆಂದು ಸಾಬೀತುಗೊಂಡಿತ್ತು.  ಪ್ರಕರಣಕ್ಕೆ ಸಂಬಂಧಿಸಿ ಸೆರೆಗೀಡಾಗಿ ರಿಮಾಂಡ್ ನಲ್ಲಿರುವ ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ  ತೆಗೆಯಲಾಗು ವುದೆಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಘಟನೆ ಸ್ಥಳಕ್ಕೆ ಆತನನ್ನು ಕರೆದೊಯ್ದು ಮಾಹಿತಿ ಸಂಗ್ರಹಿಸಲಾಗುವುದು. ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿ ಯಾಗಿದ್ದಾರೆಯೇ ಎಂದು ತಿಳಿಯಲು ಆರೋಪಿಯನ್ನು ಸಮಗ್ರ ತನಿಖೆಗೊಳಪಡಿಸಬೇಕಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page