ಕುಂಬಳೆ: ಆರಿಕ್ಕಾಡಿಯಲ್ಲಿ ಅಬಕಾರಿ ತಂಡ ನಡೆಸಿದ ವಾಹನ ತಪಾಸಣೆ ವೇಳೆ ಆಟೋರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 180 ಎಂ.ಎಲ್ನ 720 ಟೆಟ್ರಾ ಪ್ಯಾಕೆಟ್ ಹಾಗೂ 90 ಎಂಎಲ್ನ 480 ಪ್ಯಾಕೆಟ್ ಸೇರಿದಂತೆ ಒಟ್ಟು 172.8 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ.
ಇದಕ್ಕೆ ಸಂಬAಧಿಸಿ ಕೊಲ್ಲಂಗಾನ ನಿವಾಸಿ ಗಣೇಶ್ (39) ಮತ್ತು ಬೇಳ ವಿಷ್ಣುನಗರದ ರಾಜೇಶ್ (45) ಎಂಬಿಬ್ಬರನ್ನು ಅಬಕಾರಿ ತಂಡ ಬಂಧಿಸಿ ಪ್ರಕರಣ ದಾಖಲಿಸಿಕೊಂ ಡಿದೆ. ಮಾಲು ಸಾಗಿಸಲು ಬಳಸಲಾದ ಆಟೋರಿಕ್ಷಾವನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ ಇನ್ಸ್ಪೆಕ್ಟರ್ ಜೆ. ಜೋಸೆಫ್ರ ನೇತೃತ್ವದಲ್ಲಿ ಪ್ರಿವೆಂಟಿವ್ ಆಫೀಸರ್ (ಗ್ರೇಡ್) ಅಜೀಶ್ ಸಿ, ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಮಂಜುನಾಥ ವಿ, ಮೋಹನ್ ಕುಮಾರ್ ಮತ್ತು ರಾಜೇಶ್ ಪಿ. ಎಂಬಿವರನ್ನೊಳ ಗೊಂಡ ಅಬಕಾರಿ ತಂಡ ನಿನ್ನೆ ಈ ಕಾರ್ಯಾಚರಣೆ ನಡೆಸಿದೆ.
