ಆಟೋ ರಿಕ್ಷಾ ಮಗುಚಿ ಯುವಕ ಮೃತ್ಯು: ಮೂವರಿಗೆ ಗಾಯ

ಕಾಸರಗೋಡು: ಕ್ಷೇತ್ರ ಉತ್ಸವ ವೀಕ್ಷಿಸಲು ತೆರಳುತ್ತಿದ್ದವರು ಸಂಚರಿಸಿದ ಆಟೋ ರಿಕ್ಷಾ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಯುವಕ ಮೃತಪಟ್ಟ ಘಟನೆ ನಡೆದಿದೆ. ಇತರ ಮೂರು ಮಂದಿ ಗಾಯಗೊಂ ಡಿದ್ದಾರೆ.  ಚೆರ್ವ ತ್ತೂರು ಬಳಿಯ ಅಮಿಞ್ಞಿಕೋಡ್ ನಿವಾಸಿ ಕೆ. ಅನುರಾಗ್ (೨೬) ಎಂಬವರು ಮೃತಪಟ್ಟ ದುರ್ದೈವಿ. ನಿನ್ನೆ ಅಪರಾಹ್ನ ೩ ಗಂಟೆಗೆ ಕೊಡಕ್ಕಾಡ್ ವೆಳ್ಳಚ್ಚಾಲ್‌ನಲ್ಲಿ ಅಪಘಾತ ವುಂಟಾಗಿದೆ. ಸ್ನೇಹಿತರೊಂದಿಗೆ ಮುಚ್ಚಿಲೋಟ್ ಉತ್ಸವಕ್ಕೆ ತೆರಳುತ್ತಿದ್ದಾಗ ಅಪಘಾತವುಂ ಟಾಗಿದೆ. ಸಂಚರಿಸುತ್ತಿದ್ದ ಆಟೋ ರಿಕ್ಷಾ  ಮಗುಚಿಬಿದ್ದಿದೆ. ಇದರಿಂದ ಗಂಭೀರ ಗಾಯಗೊಂಡ ಅನುರಾಗ್‌ರನ್ನು  ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಅನುರಾಗ್ ಈ ಹಿಂದೆ ಕಾಞಂಗಾಡ್ ಬಸ್ ನಿಲ್ದಾಣ ಬಳಿಯ ಜ್ಯುವೆಲ್ಲರಿಯಲ್ಲಿ ನೌಕರನಾಗಿದ್ದರು. ಕಾಞಂಗಾಡ್‌ನ ಜಿಎಸ್‌ಟಿ ಅಧಿಕಾರಿ ಕೆ. ರಘು-ಅಂಬಿಕ ದಂಪತಿಯ ಪುತ್ರನಾದ ಮೃತರು ಸಹೋದರಿ ಅಮೃತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page