ಆದರ್ಶ ಮಂಜೇಶ್ವರ ರೈಲ್ವೇ ನಿಲ್ದಾಣದಲ್ಲಿ ಸೋರುವ ಕಟ್ಟಡದಿಂದ ಸಮಸ್ಯೆ
ಮಂಜೇಶ್ವರ: ಆದರ್ಶ ನಿಲ್ದಾಣ ವಾಗಿರುವ ಮಂಜೇಶ್ವರ ರೈಲ್ವೇ ನಿಲ್ದಾ ಣದಲ್ಲಿ ಮೂಲ ಭೂತ ಸೌಕರ್ಯಗಳ ಅಭಿವೃದ್ಧಿ ಅಂತಿಮ ಹಂತಕ್ಕೆ ತಲುಪಿ ದ್ದರೂ ಪ್ರಧಾನ ಕಟ್ಟಡ ಶೋಚನೀ ಯಾವಸ್ಥೆಯಲ್ಲಿ ಮುಂದುವರಿ ಯುತ್ತಿದೆ. ಓಬಿರಾಯನ ಕಾಲದಷ್ಟು ಹಳೆಯದಾ ಗಿರುವ ಕಟ್ಟಡವೊಂದರಲ್ಲಿ ನಿಲ್ದಾಣದ ಕಚೇರಿ ಈಗ ಕಾರ್ಯಾಚರಿಸುತ್ತಿದೆ. ಮಳೆ ಬಿರು ಸುಗೊಳ್ಳುತಿದ್ದಂತೆ ಸೋ ರಲಿಕ್ಕೂ ಶುರುವಾಗಿದೆ. ಸೋರುವು ದನ್ನು ತಡೆಯಲು ಮೇಲ್ಭಾಗಕ್ಕೆ ಪ್ಲಾಸ್ಟಿಕ್ ಹೊದಿಕೆಯ ಜೊತೆಯಾಗಿ ಶೀಟನ್ನು ಹಾಕಲಾಗಿದೆ. ಟಿಕೆಟ್ ಕೌಂಟರ್ ಹಾಗೂ ಸ್ಟೇಶನ್ ಮಾಸ್ಟರ್ ಕಚೇರಿ ಈ ದುರವಸ್ಥೆ ಯಿಂದಿದೆ.
ನಿರ್ಮಾಣ ಪೂರ್ಣಗೊಂಡು ತಿಂಗಳುಗಳೇ ಕಳೆದರೂ ರೈಲ್ವೇ ನಿಲ್ದಾಣ ಅಭಿವೃದ್ಧಿಯ ಭಾಗವಾಗಿ ಟಿಕೆಟ್ ಕೌಂಟರ್ ಹಾಗೂ ಇತರ ಕಚೇರಿಗಳಿಗಾಗಿ ನಿರ್ಮಿಸಲಾದ ಕಟ್ಟಡವನ್ನು ಇಷ್ಟರ ತನಕ ತೆರೆದು ಕೊಟ್ಟಿಲ್ಲ. ನವೀಕರಣದ ಭಾಗವಾಗಿ ಟಿಕೆಟ್ ಕೌಂಟರನ್ನು ಪ್ರಸ್ತುತ ಕಟ್ಟಡದ ಹಿಂಬಾಗಕ್ಕೆ ಬದಲಿಸಿ ಬಹಳ ಸಮಯಗಳೇ ಕಳೆದಿದೆ. ಇದು ಕೂಡಾ ಪ್ರಯಾಣಿಕರಿಗೆ ಭಾರೀ ಸಮಸ್ಯೆಯನ್ನು ಸೃಷ್ಟಿಸಿದೆ. ಸ್ಪೇಶನ್‌ನಲ್ಲಿ ಹೊಸ ಸಿಗ್ನಲ್ ಕಟ್ಟಡವನ್ನು ನಿರ್ಮಿಸಿದರೆ ಮಾತ್ರ ಹಳೆಯ ಕಟ್ಟಡವನ್ನು ತೆರವು ಗೊಳಿಸಬಹುದಾಗಿದೆ. ಮತ್ತೊಂ ದೆಡೆ ಇಂಟರ್‌ಲಾಕ್ ಹಾಗೂ ವಿದ್ಯುತೀಕರಣದ ಕೆಲಸ ನಡೆಯು ತ್ತಿದೆ. ಇದೆಲ್ಲಾ ಪೂರ್ಣಗೊಂಡ ಬಳಿಕವಷ್ಟೇ ನಿಲ್ದಾಣದ ಸಮಸ್ಯೆಗೊಂದು ಅಂತ್ಯ ಕಾಣ ಬಹುದು. ಈ ಸೋರುತ್ತಿರುವ ಕಟ್ಟಡದಲ್ಲಿ ಇನ್ನೆಷ್ಟು ಕಾಲ ಮುಂದುವರಿಯುಬೇಕೆAಬುದು ಊರವರ ಹಾಗೂ ನೌಕರರ ಪ್ರಶ್ನೆ. ಸಂಬAಧಪಟ್ಟವರು ಕೂಡಲೇ ಇತ್ತ ಗಮನ ಹರಿಸುವಂತೆ ಸ್ಥಳೀಯರು ಹಾಗೂ ಪ್ರಯಾಣಿಕರು ಆಗ್ರಹಿಸಿದ್ದಾರೆ.