ಆದೂರಿನಿಂದ ಬೈಕ್ ಕಳವುಗೈದ ತಂಡ ಸೆರೆ
ಮುಳ್ಳೇರಿಯ: ಆದೂರು ಸಿಎ ನಗರದಿಂದ ಎರಡು ಬೈಕ್‌ಗಳನ್ನು ಕಳವುಗೈದ ಪ್ರಕರಣದಲ್ಲಿ ಪ್ರಾಯ ಪೂರ್ತಿಯಾಗದ ಮೂರು ಮಕ್ಕಳ ಸಹಿತ ಆರು ಮಂದಿಯನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಪೊವ್ವಲ್‌ನ ಗುಜರಿ ವ್ಯಾಪಾರಿ ಶರೀಫ್ (೩೯), ಪೊವ್ವಲ್ ಮಾಸ್ತಿಕುಂಡ್ ಕಾಲನಿಯ ಅಬ್ದುಲ್ ಲತೀಫ್ (೩೬), ಎಡನೀರು ಕುಂಡೋರ್‌ಮೂಲೆಯ ನಿತಿನ್ (೧೮) ಎಂಬಿವರನ್ನು ಆದೂರು ಎಸ್‌ಐ ಅನುರೂಪ್ ನೇತೃತ್ವದ ತಂಡ ಬಂಧಿಸಿದೆ. ಕಳವುಗೈದ ಬೈಕ್‌ಗಳನ್ನು ಶರೀಫ್‌ನ ಪೊವ್ವಲ್ ನಲ್ಲಿರುವ ಗುಜರಿ ಅಂಗಡಿಯಿಂದ ಪತ್ತೆಹಚ್ಚಲಾಗಿದೆ. ಸೆರೆಯಾದವರಲ್ಲಿ ಮೂರು ಮಂದಿ ೧೬, ೧೭ ವರ್ಷದವರಾಗಿದ್ದಾರೆ. ಆದೂರು ರಹ್ಮತ್ ನಗರ ಬದ್ರಿಯಾ ಮಂಜಿಲ್‌ನ ಬಿ.ಎ. ಸುಹೈಲ್, ಸಿ.ಎ ನಗರದ ವೆಲ್ಡಿಂಗ್ ಅಂಗಡಿಯ ಕಾರ್ಮಿಕ ಎಂ. ಸುಜಿತ್ ಕುಮಾರ್ ಎಂಬಿವರ ಬೈಕ್‌ಗಳನ್ನು ಇತ್ತೀಚೆಗೆ ಕಳವುಗೈಯ್ಯಲಾಗಿತ್ತು. ಸಿ.ಎ ನಗರ ಮಸೀದಿ ಸಮೀಪ ನಿಲ್ಲಿಸಿದ್ದ ಸುಹೈಲ್‌ನ ಬೈಕ್ ಕಳವುಹೋಗಿದ್ದರೆ ಅಂಗಡಿ ಎದುರಿನಿಂದ ಸುಜಿತ್ ಕುಮಾರ್‌ನ ಬೈಕ್‌ನ್ನು ಕಳವುಗೈ ಯ್ಯಲಾಗಿದೆ. ಕಳವುಗೈದ ಬೈಕ್‌ಗಳನ್ನು ಗುಜರಿ ಅಂಗಡಿಗೆ ತಲುಪಿಸಿ ಮುರಿದು ಮಾರಾಟ ಮಾಡುವುದು ಈ ತಂಡದ ರೀತಿಯೆಂದು ಪೊಲೀಸರು ತಿಳಿಸಿದ್ದಾರೆ. ಈ ಮೊದಲು ಮುಳ್ಳೇರಿಯದ ವಿಲ್ಲೇಜ್ ಆಫೀಸ್‌ನ ಸಮೀಪದಿಂದ ನೌಕರನ ಬೈಕ್‌ನ್ನು ಕಳವುಗೈದಿರುವುದು ಇದೇ ತಂಡವೆಂದು ಪೊಲೀಸರಿಗೆ ಸೂಚನೆ ಲಭಿಸಿದೆ. ಸೆರೆಯಾದ ತಂಡ ಇತರ ಬೈಕ್ ಕಳವು ಪ್ರಕರಣ ದಲ್ಲೂ ಶಾಮೀಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.