ಆದೂರು, ನೀಲೇಶ್ವರದಲ್ಲಿ ಪೋಕ್ಸೋ ಕೇಸು: ಇಬ್ಬರ ಬಂಧನ

ಕಾಸರಗೋಡು: 11ರ ಹರೆಯದ ಇಬ್ಬರು ಮಕ್ಕಳು ನೀಡಿದ ದೂರಿನ ಮೇರೆಗೆ ಆದೂರು ಹಾಗೂ ನೀಲೇಶ್ವರ ಪೊಲೀಸ್ ಠಾಣೆಗಳಲ್ಲಿ ಎರಡು ಪೋಕ್ಸೋ ಕೇಸುಗಳು ದಾಖಲಾಗಿದೆ. ನೀಲೇಶ್ವರದಲ್ಲಿ 11ರ ಹರೆಯದ ಬಾಲಕಿಗೆ 30ರ ಹರೆಯದ ತಾಯಿಯ ಸಹೋದರ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಇದರಂತೆ ಕೇಸು ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬೆಳ್ಳೂರು ನೇಜಿಕ್ಕಾರ್‌ನ ಕೃಷ್ಣರಾಜ್ (40) ವಿರುದ್ಧ ಆದೂರು ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. 11ರ ಹರೆಯದ ಬಾಲಕನನ್ನು ಅಸಭ್ಯ ರೀತಿಯಲ್ಲಿ ಸ್ಪರ್ಶಿಸಿದ ದೂರಿನಂತೆ ಕೇಸು ದಾಖಲಿಸಿ ಬಂಧಿಸಲಾಗಿದೆ. ಒಂದಕ್ಕಿಂತ ಹೆಚ್ಚು ಬಾರಿ ಸ್ಪರ್ಶಿಸಿದ ಹಿನ್ನೆಲೆಯಲ್ಲಿ ಬಾಲಕ ದೂರು ನೀಡಿದ್ದಾನೆನ್ನಲಾಗಿದೆ.

RELATED NEWS

You cannot copy contents of this page