ಆನ್‌ಲೈನ್ ವಂಚನೆ: ಚೆಂಗಳ ನಿವಾಸಿ ಬಂಧನ
ಕಾಸರಗೋಡು: ಆನ್‌ಲೈನ್ ವ್ಯಾಪಾರದ ಹೆಸರಲ್ಲಿ ತೊರಾವೂರು ನಿವಾಸಿಯೋರ್ವರಿಂದ ೪.೫ ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಚೆಂಗಳ ನೆಕ್ರಾಜೆ ಸಾಲತ್ತಡ್ಕ ವೀಟಿಲ್ ಉದಯ ಎಂಬಾತನನ್ನು ಮಣ್ಣಾಂಚೇರಿ ಪೊಲೀಸರು ಬಂಧಿಸಿದ್ದಾರೆ. ಆನ್‌ಲೈನ್ ವ್ಯಾಪಾರಕ್ಕೆ ಸಂಬಂಧಿಸಿ ವಾಟ್ಸಪ್ ನಲ್ಲಿ ಪರಿಚಯಗೊಂಡ ಆರೋಪಿ ಆನ್‌ಲೈನ್ ವ್ಯಾಪಾರದ ಹೆಸರಲ್ಲಿ ತನ್ನಿಂದ ಹಣ ಪಡೆದು ಬಳಿಕ ವಂಚಿಸಿರುವುದಾಗಿ ಪೊಲೀಸರು ನೀಡಿದ ದೂರಿನಲ್ಲಿ ತೊರಾವೂರು ನಿವಾಸಿ ಆರೋಪಿಸಿದ್ದಾರೆ. ಅದರಂತೆ ಆರೋಪಿ ವಿರುದ್ಧ ಮಣ್ಣಾಂಚೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.