ಕಾಸರಗೋಡು: ಆನ್‌ಲೈನ್ ವಂಚನೆ ತಂಡಕ್ಕೆ ಸೇರಿದ ಇಬ್ಬರನ್ನು ಕಲ್ಲಿಕೋಟೆಯಿಂದ ಕಾಸರಗೋಡು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ನಿವಾಸಿಗಳಾದ ಗಣೇಶನ್ (41) ಮತ್ತು ಹಮಾದ್ ಸಯ್ಯಿದ್ ಕೇಳ್ವೆ (35) ಎಂಬವರು ಬಂಧಿತ ಆರೋಪಿಗಳು. ಕಾಸರಗೋಡು ಸೈಬರ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಇ. ಅನೂಪ್ ಕುಮಾರ್ ನೇತೃತ್ವದ ತಂಡ ಇವರನ್ನು ಬಂಧಿಸಿದೆ.
ನಾವು ಸ್ಟಾಕ್ ಮಾರ್ಕೆಟ್ ಕಂಪೆನಿಯ ಪ್ರತಿನಿಧಿಗಳಾಗಿದ್ದೇವೆ ಎಂದು ನಂಬಿಸಿ ಪಡನ್ನ ನಿವಾಸಿಯೋರ್ವರ ಕೈಯಿಂದ ಹಲವು ಬಾರಿಯಾಗಿ 34,25,999 ರೂ. ಪಡೆದು ವಂಚಿಸಿದ ಪ್ರಕರಣದಲ್ಲಿ ಇವರ ವಿರುದ್ಧ ಸೈಬರ್ ಸ್ಟೇಶನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಸವಾದ್, ಸಿವಿಲ್ ಪೊಲೀಸ್ ಆಫೀಸರ್ ಹರಿಪ್ರಸಾದ್ ಎಂಬವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.