ಆಪರೇಷನ್ ಆಗ್, ಡಿ ಹಂಟ್: ತಲೆಮರೆಸಿಕೊಂಡಿದ್ದ 67 ಮಂದಿ ಸೆರೆ, 135 ಮಂದಿಯ ಮನೆಗಳಿಗೆ ದಾಳಿ

ಕಾಸರಗೋಡು: ಸಮಾಜ ವಿರುದ್ಧ ಚಟುವಟಿಕೆಗಳು, ಮಾದಕ ಪದಾರ್ಥ ಮಾಫಿಯಾ ಚಟುವಟಿಕೆಗಳಲ್ಲಿ ಏರ್ಪಟ್ಟಿರುವವರ ವಿರುದ್ಧ, ಗೂಂಡಾಗಳ ವಿರುದ್ಧ ಮುಂದುವರಿಯುತ್ತಿರುವ ಆಪರೇಷನ್ ಆಗ್, ಡಿಹಂಟ್ ಮೊದಲಾದ ಪ್ರತ್ಯೇಕ ಕ್ರಮಗಳ ಅಂಗವಾಗಿ ನಡೆಸುತ್ತಿರುವ ತಪಾಸಣೆಗಳಲ್ಲಿ ಸಮಾಜ ವಿರುದ್ಧ ಚಟುವಟಿಕೆಗಳಲ್ಲಿ ಏರ್ಪಟ್ಟಿದ್ದ ಹಲವಾರು ಮಂದಿ ವಿರುದ್ಧ ಕಳೆದ ಮೂರು ದಿನಗಳಲ್ಲಿ ಜಿಲ್ಲಾ ಪೊಲೀಸ್ ಕ್ರಮ ಕೈಗೊಂಡಿದೆ. ಆಗ್ ತಪಾಸಣೆಯಂಗವಾಗಿ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಒಳಗೊಂಡು ತಲೆಮರೆಸಿಕೊಂಡಿದ್ದ 67 ಮಂದಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಅಲ್ಲದೆ ಗಂಭೀರ ಸ್ವಭಾವದ ಆರೋಪಗಳಲ್ಲಿ ಸಿಲುಕಿಕೊಂಡ ನಾಲ್ಕು ಆರೋಪಿಗಳು, ಇತರ ಪ್ರಕರಣಗಳಲ್ಲಿ ಒಳಗೊಂಡ 11 ಆರೋಪಿಗಳನ್ನು ಬಂಧಿಸಲಾಗಿದೆ.
ಲಹರಿ ಮಾದಕ ಪದಾರ್ಥ ವಿರುದ್ಧ ನಡೆಸುವ ಆಪರೇಷನ್ ಡಿಹಂಟ್ನAಗವಾಗಿ ಕಳೆದ ಮೂರು ದಿನದೊಳಗೆ 135 ಮಂದಿಯ ಮನೆಗಳಿಗೆ ಪೊಲೀಸರು ದಾಳಿ ನಡೆಸಿದರು. ಗಾಂಜಾ, ಎಂಡಿಎAಎ ಕೈವಶವಿರಿಸಿಕೊಂಡಿರುವುದು, ಉಪಯೋಗ ಮೊದಲಾದ ಪ್ರಕರಣಗಳಲ್ಲಿ 12 ಕೇಸು ದಾಖಲಿಸಲಾಗಿದೆ. ಅಲ್ಲದೆ 14 ಆರೋಪಿಗಳನ್ನು ಬಂಧಿಸಲಾಗಿದೆ. ಗೂಂಡಾ ಯಾದಿಯಲ್ಲಿ ಒಳಗೊಂಡ ಪೊಲೀಸರು ನಿರೀಕ್ಷಿಸುತ್ತಿದ್ದ 140 ಅಪರಾಧಿಗಳ ಮನೆಗೆ ಪೊಲೀಸರು ದಾಳಿ ನಡೆಸಿದರು. ಕಳವು ಪ್ರಕರಣಗಳಲ್ಲಿ ಒಳಗೊಂಡ ಆರೋಪಿಗಳ ಮನೆಗಳ, ರಹಸ್ಯ ಅಡಗು ತಾಣಗಳ ಬಗ್ಗೆ ಪೊಲೀಸರು ನಿಗಾ ತೀವ್ರಗೊಳಿಸಿದ್ದಾರೆ. ಗೂಂಡಾ ಕಾನೂನು ಪ್ರಕಾರ ಮಂಜೇಶ್ವರ, ಕುಂಬಳೆ, ಕಾಸರ ಗೋಡು, ಬೇಕಲ, ಹೊಸದುರ್ಗ ಎಂಬೀ ಪೊಲೀಸ್ ಠಾಣೆಗಳ ಲ್ಲಾಗಿ ಐದು ಮಂದಿಯನ್ನು ಜಿಲ್ಲೆಯಿಂದ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಲಾಗಿದೆ. ಮೂರು ಮಂದಿಯನ್ನು ವಾರಕ್ಕೆ ಒಮ್ಮೆ ಪೊಲೀಸ್ ಠಾಣೆಗೆ ಬಂದು ಆರು ತಿಂಗಳವರೆಗೆ ಸಹಿ ಹಾಕುವಂತೆ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಸಮಾಜ ವಿರುದ್ಧ ಗೂಂಡಾ ಚಟುವಟಿಕೆಗಳಲ್ಲಿ ಏರ್ಪಟ್ಟಿದ್ದ 14 ಮಂದಿಯನ್ನು ಈಗಾಗಲೇ ಗಡಿಪಾರು ಮಾಡಲಾಗಿದೆ.
ಈ ಆದೇಶ ಉಲ್ಲಂಘಿಸಿ ಊರಿಗೆ ತಲುಪಿದ ಮಾವಿಲಕಡಪ್ಪುರ ನಿವಾಸಿಯಾದ ಅಂಜಾದ್ನನ್ನು ಚಂದೇರ ಪೊಲೀಸರು ಬಂಧಿಸಿ, ಕೇಸು ದಾಖಲಿಸಿದ್ದು ಈತನನ್ನು ನ್ಯಾಯಾಲಯ ರಿಮಾಂಡ್ಗೊಳಿಸಿದೆ. ಮುಂದಿನ ದಿನಗಳಲ್ಲೂ ಈ ರೀತಿಯ ಚಟುವಟಿಕೆಗಳಲ್ಲಿ ಏರ್ಪಡುವವರ ವಿರುದ್ಧ ಕಠಿಣ ಕ್ರಮ ಪೊಲೀಸರು ಸ್ವೀಕರಿಸಲಿದ್ದಾರೆ. ಗೂಂಡಾ ಕಾನೂನು ಪ್ರಕಾರ ಇನ್ನಷ್ಟು ಮಂದಿ ವಿರುದ್ಧ ಕ್ರಮ ಸ್ವೀಕರಿಸಲು ಜಿಲ್ಲಾಧಿಕಾರಿ, ರೇಂಜ್ ಡಿಐಜಿ ರಿಪೋರ್ಟ್ ಸಲ್ಲಿಸಿದ್ದಾರೆ. ಎರಡಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಏರ್ಪಟ್ಟು ಪೊಲೀಸ್ ನಿಗಾದಲ್ಲಿರುವ ಸಮಾಜ ವಿರುದ್ಧ ಚಟುವಟಿಕೆಗಳಲ್ಲಿ ಏರ್ಪಟ್ಟಿರುವವರನ್ನು ಪೊಲೀಸರು ನಿರೀಕ್ಷಿಸುತ್ತಿದ್ದಾರೆ. ಇಂತವರು ಮತ್ತೆ ಈ ರೀತಿಯ ಪ್ರಕರಣಗಳಲ್ಲಿ ಏರ್ಪಟ್ಟರೆ ಅವರ ವಿರುದ್ಧ ಕಾಪಾ ಪ್ರಕಾರ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page