‘ಆಪರೇಷನ್ ಸಿಂಧೂರ’: ಮಧ್ಯಸ್ಥಿಕೆ ಸ್ವೀಕರಿಸಿಲ್ಲ; ಟ್ರಂಪ್‌ಗೆ ಮೋದಿ

ನವದೆಹಲಿ: ಕಾಶ್ಮೀರದ ಪಹ ಲ್ಗಾಮ್‌ನಲ್ಲಿ ಪಾಕಿಸ್ತಾನದ ಭಯೋ ತ್ಪಾದಕರು ನಡೆಸಿದ ದಾಳಿಗೆ  ಪ್ರತೀಕಾರವಾಗಿ ಭಾರತ ಪಾಕಿಸ್ತಾನದ  ವಿರುದ್ಧ ನಡೆಸಿದ ಆಪರೇಶನ್ ಸಿಂಧೂರ್ ಕಾರ್ಯಾಚರಣೆಯ ವಿಷಯದಲ್ಲಿ ಭಾರತ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಸ್ವೀಕರಿಸಿಲ್ಲ ವೆಂದೂ, ಪಾಕಿಸ್ತಾನ ಸತತವಾಗಿ ಅಂಗಲಾಚಿಕೊಂಡ ಕಾರಣದಿಂದ ಆಪರೇಶನ್ ಸಿಂಧೂರ್ ಕಾರ್ಯಾ ಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಗಿಬಂದಿದೆ. ಅಲ್ಲದೆ ಈ ವಿಷಯದಲ್ಲಿ ಯಾವುದೇ ತೃತಿಯ ದೇಶಗಳ ಮಧ್ಯಸ್ಥಿಕೆಯನ್ನು ಭಾರತ ಸ್ವೀಕರಿಸಿಲ್ಲವೆಂದು ಪ್ರಧಾನಮಂತ್ರಿ ನರೇಂದ್ರಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸ್ಪಷ್ಪಪಡಿಸಿದ್ದಾರೆ. ಟ್ರಂಪ್‌ರೊಂದಿಗೆ ೩೫ ನಿಮಿಷಗಳ ಕಾಲ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ ಅವರಿಗೆ ಮೋದಿ ಈ ವಿಷಯ ಸ್ಪಷ್ಟಪಡಿಸಿದ್ದಾರೆಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಶ್ರಿ ತಿಳಿಸಿದ್ದಾರೆ.

ಟ್ರಂಪ್ ನೀಡಿದ ನಿರ್ದೇಶ ಪ್ರಕಾರ ಭಾರತ  ಆಪರೇಶನ್ ಸಿಂಧೂರ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತೆಂದು ವಿರೋಧಪಕ್ಷ ನಾಯಕ  ರಾಹುಲ್ ಗಾಂಧಿ ಆರೋಪಿಸಿದ್ದರು.  ಆಪರೇಶನ್ ಸಿಂಧೂರು ವಿಷಯದಲ್ಲಿ ಯಾವುದೇ ತೃತೀಯ ಶಕ್ತಿಯ ಮಧ್ಯಸ್ಥಿಕೆ ಸ್ವೀಕರಿಸಿಲ್ಲವೆಂದು ಸ್ವತಃ ಟ್ರಂಪ್ ಗೆ ಮೋದಿ ಸ್ಪಷ್ಟಪಡಿಸುವ ಮೂಲಕ ಆ  ವಿಷಯದಲ್ಲಿ ವಿರೋಧಪಕ್ಷಗಳ   ಬಾಯಿ ಮುಚ್ಚಿಸುವಂತೆ ಮಾಡಿದ್ದಾರೆ.

ಪಾಕಿಸ್ತಾನದೊಂದಿಗಿರುವ ಗಡಿ ವಿವಾದ ಹಾಗೂ ಅದರ ಹೆಸರಲ್ಲಿ ಪಾಕಿಸ್ತಾನದ  ಭಯೋತ್ಪಾದನೆ ವಿರುದ್ಧ ಭಾರತ ನಡೆಸುತ್ತಿರುವ ನಿಗ್ರಹ ಕಾರ್ಯಾಚರಣೆ ವಿಷಯದಲ್ಲಿ  ಭಾರತ ಈತನಕ ಎಂದೂ ತೃತೀಯ ಶಕ್ತಿಯ ಮಧ್ಯಸ್ಥಿಕೆ ಸ್ವೀಕರಿಸಿಲ್ಲ ಮಾತ್ರವಲ್ಲ ಇನ್ನು ಮುಂದೆಯೂ ಸ್ವೀಕರಿಸದೆಂದು ಮೋದಿ ಟ್ರಂಪ್‌ಗೆ ಸ್ಪಷ್ಟಪಡಿಸಿದ್ದಾರೆ. ಭಾರತ ಈಗ ಭಯೋತ್ಪಾದನಾ ಕೃತ್ಯಗಳನ್ನು ಪ್ರಾಕ್ಸಿ  ಕ್ರಮಗಳಾಗಿ ಅಲ್ಲ ಬದಲಾಗಿ ಯುದ್ಧ ಕ್ರಮಗಳಾಗಿ ಪರಿಗಣಿಸುತ್ತಿದೆಂದೂ ಇದೇ ಸಂದರ್ಭದಲ್ಲಿ ಮೋದಿ ಒತ್ತ್ತಿ ಹೇಳಿದ್ದಾರೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page