ಆಮ್ ಆದ್ಮಿಯಿಂದ ಉಪವಾಸ ಮುಷ್ಕರ

ಕಾಸರಗೋಡು: ಆಮ್ ಆದ್ಮಿ ಪಕ್ಷದ ಕಾಸರಗೋಡು ಜಿಲ್ಲಾ ಸಮಿತಿ ಆಶ್ರಯದಲ್ಲಿ  ಏಕದಿನ ಉಪವಾಸ ಮುಷ್ಕರ ನಡೆಸಲಾಯಿತು. ಪಕ್ಷದ ಕಿರಿಯ ಮುಖಂಡ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಇ.ಡಿ ಬಂಧಿಸಿರುವುದನ್ನು ಪ್ರತಿಭಟಿಸಿ ಕಾಸರಗೋಡು ಹೊಸ ಬಸ್  ನಿಲ್ದಾಣ ಪರಿಸರದಲ್ಲಿ ಉಪವಾಸ ಮುಷ್ಕರ ನಡೆಸಲಾಗಿದೆ. ಜಿಲ್ಲಾಧ್ಯಕ್ಷ ಸಂತೋಷ್ ಕುಮಾರ್ ಉದ್ಘಾಟಿಸಿ ದರು. ಮಂಡಲ ಅಧ್ಯಕ್ಷ ಪ್ರತಾಪ್  ಬಂಗೇರ ಅಧ್ಯಕ್ಷತೆ ವಹಿಸಿದರು. ಸಿ.ಎಂ. ಮುಸ್ತಫ, ಪಿ.ಸಿ. ಬಾಲಚಂದ್ರನ್, ಮರಿಯಮ್ಮ ಚಾಕೋ, ವಿಜಯ ಕುಮಾರ್, ಎಂ.ವಿ. ಶಿಲ್ಪರಾಜ್, ಮುಹಾವಿತ್ ತಳಂಗರೆ, ಜೋರ್ಜ್ ಸೇವಿಯರ್, ಶೆಬಿ ಕೆ. ಅಗಸ್ಟಿನ್, ಮುಸ್ತು ಮಾಣಿಮೂಲ, ಅಬ್ಜುಲ್ ಜಲೀಲ್, ಎಂ. ಮನೋಜ್, ಜೇಮ್ಸ್ ಮಾತನಾಡಿದರು.

You cannot copy contents of this page