ಆರ್‌ಎಸ್‌ಎಸ್ ನೇತಾರರೊಂದಿಗೆ ಎಡಿಜಿಪಿ ಭೇಟಿಎಡರಂಗದಲ್ಲಿ ಅತೃಪ್ತಿ ಅಲೆ
ತಿರುವನಂತಪುರ: ಆರ್‌ಎಸ್‌ಎಸ್ ನ ಇಬ್ಬರು ನೇತಾರರನ್ನು ತೃಶೂರು ಮತ್ತು ತಿರುವನಂತಪುರದಲ್ಲಿ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆಗಾರಿಕೆ ಹೊಂದಿರುವ ರಾಜ್ಯ ಹೆಚ್ಚುವರಿ ಪೊಲೀ ಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್. ಅಜಿತ್ ಕುಮಾರ್ ಸಂದರ್ಶಿಸಿ ನಡೆಸಿದ ಸಮಾಲೋಚನೆ ಎಡರಂಗದಲ್ಲಿ ಭಾರೀ ಅತೃಪ್ತಿಯ ಅಲೆ ಹೊಗೆಯಾಡುವಂತೆ ಮಾಡಿದೆ.
ಎಡಿಜಿಪಿಯನ್ನು ರಾಜ್ಯ ಕಾನೂ ನು ಮತ್ತು ಸುವ್ಯವಸ್ಥೆಯ ಹೊಣೆ ಗಾರಿಕೆಯಿಂದ ಹೊರತುಪಡಿಸಿಯೇ ಸಿದ್ಧವೆಂದು ಎಡರಂಗದ ಪ್ರಧಾನ ಘಟಕ ಪಕ್ಷಗಳಲ್ಲೊಂದಾಗಿರುವ ಸಿಪಿಐ ಹಠಹಿಡಿದಿದೆ. ಈ ವಿಷಯವನ್ನು ಇಂದು ನಡೆಯಲಿರುವ ಎಡರಂಗದ ರಾಜ್ಯ ಸಮಿತಿ ಸಭೆಯ ಮುಂದಿರಿಸ ಲು ಸಿಪಿಐ ತೀರ್ಮಾನಿಸಿದೆ. ಎಡರಂಗದ ರಾಜ್ಯ ಸಮಿತಿ ಸಭೆ ಇಂದು ಅಪರಾಹ್ನ ೩ ಗಂಟೆಗೆ ತಿರುವನಂತಪುರದಲ್ಲಿ ನಡೆಯಲಿದೆ. ಇದರಲ್ಲಿ ಎಡರಂಗದ ಎಲ್ಲಾ ಘಟಕ ಪಕ್ಷಗಳು ಭಾಗವಹಿಸಿ ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಲಿವೆ.
ಎಡಿಜಿಪಿಯವರು ಆರ್‌ಎಸ್ ಎಸ್ ನೇತಾರರನ್ನು ಸಂದರ್ಶಿಸಿದ್ದು ಇಂ ದಿನ ಸಭಯ ಪ್ರಧಾನ ವಿಷಯವಾಗ ಲಿದೆ. ಸಿಪಿಎಂ ಎಂದೂ ಯಾವುದೇ ರೀತಿಯ ತುಷ್ಟೀಕರಣ ನೀತಿಯನ್ನು ಆರ್‌ಎಸ್‌ಎಸ್ ನೊಂದಿಗೆ ಹೊಂದಿಲ್ಲ. ಆದರೆ ಆರ್‌ಎಸ್‌ಎಸ್ ನೊಂದಿಗೆ ಸದಾ ನಂಟು ಹೊಂದಿರುವ ಪಕ್ಷವಾಗಿದೆ ಕಾಂ ಗ್ರೆಸ್ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇನ್ನೊಂ ದೆಡೆ ಹೇಳಿದ್ದಾರೆ. ಸಿಪಿಎಂ ಸದಾ ಆರ್‌ಎಸ್‌ಎಸ್ ವಿರುದ್ಧ ನಿಲುವು ತಾಳುತ್ತಾ ಬಂದಿದೆ. ಆರ್‌ಎಸ್ ಎಸ್‌ನ್ನು ಎದುರಿಸಿ ರಂಗಕ್ಕಿಳಿದ ಸಿಪಿಎಂನ ಅದೆಷ್ಟೋ ಕಾರ್ಯಕ ರ್ತರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.