ಆಶಾ ಕಾರ್ಯಕರ್ತೆಯರಿಂದ 17ರಂದು ಸೆಕ್ರೆಟರಿಯೇಟ್ ದಿಗ್ಬಂಧನ
ತಿರುವನಂತಪುರ: ವಿವಿಧ ಬೇಡಿಕೆ ಗಳನ್ನು ಮುಂದಿರಿಸಿಕೊಂಡು ಸೆಕ್ರೆಟರಿ ಯೇಟ್ ಮುಂದೆ ಅನಿರ್ದಿಷ್ಟಾವಧಿ ಚಳವಳಿ ನಡೆಸು ತ್ತಿರುವ ಆಶಾ ಕಾರ್ಯಕರ್ತೆಯರು ಚಳವಳಿ ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಇದರ ಅಂಗವಾಗಿ ಮಾರ್ಚ್ 17ರಂದು ಸೆಕ್ರೆಟ ರಿಯೇಟ್‌ಗೆ ದಿಗ್ಬಂಧನ ನಡೆಸುವುದಾಗಿ ಕೇರಳ ಆಶಾ ಹೆಲ್ತ್ ವರ್ಕರ್ಸ್ ಅಸೋಸಿಯೇಶನ್ ರಾಜ್ಯ ಅಧ್ಯಕ್ಷ ವಿ.ಕೆ. ಸದಾನಂದನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೇರಳದ 26,128 ಆಶಾ ಕಾರ್ಯಕರ್ತೆಯರು ದಿಗ್ಬಂಧನ ಚಳವಳಿಯಲ್ಲಿ ಪಾಲ್ಗೊಳ್ಳುವರು. ಫೆಬ್ರವರಿ 10ರಂದು ಆಶಾ ಕಾರ್ಯಕರ್ತೆಯರು ಸೆಕ್ರೆಟರಿಯೇಟ್ ಮುಂದೆ ಚಳವಳಿ ಆರಂಭಿ ಸಿದ್ದರು. ೨೦ರಂದು ಮಹಾ ಸಂಗಮ, ಮಾರ್ಚ್ 3ರಂದು ವಿಧಾನಸಭೆಗೆ ಮಾರ್ಚ್, 8ರಂದು ಮಹಿಳಾ ದಿನದಂ ದು ಮಹಿಳಾ ಸಂಗಮ ನಡೆಸಿದ್ದರು.