ಆಶಾ ವರ್ಕರ್ಸ್ ಯೂನಿಯನ್‌ನಿಂದ ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಮುಂಭಾಗ ಧರಣಿ
ಉಪ್ಪಳ: ಆಶಾ ವರ್ಕರ್ಸ್ ಯೂನಿಯನ್ (ಸಿ.ಐ.ಟಿ.ಯು) ಇದರ ಮಂಜೇಶ್ವರ ಏರಿಯಾ ಕಮಿಟಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು . ಮುಂದಿಟ್ಟು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಮುಂಭಾಗದಲ್ಲಿ ಮಾರ್ಚ್ ಮತ್ತು ಧರಣಿ ನಿನ್ನೆ ನಡೆಸಲಾಯಿತು. ಸಿ.ಐ.ಟಿ.ಯು ಮಂಜೇಶ್ವರ ಏರಿಯಾ ಸಮಿತಿ ಅಧ್ಯಕ್ಷ ಡಿ. ಕಮಲಾಕ್ಷ ಉದ್ಘಾಟಿಸಿದರು. ಆಶಾ ವರ್ಕರ್ಸ್ ಯೂನಿಯನ್ ಅಧ್ಯಕ್ಷೆ ಜಲಜ ಅಧ್ಯಕ್ಷತೆ ವಹಿಸಿದ್ದರು. ನಿರ್ಮಾಣ ಕಾರ್ಮಿಕರ ಯೂನಿಯನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬೊಳ್ಳಾರು ಮಾತನಾಡಿದರು. ಆಶಾ ವರ್ಕರ್ಸ್ ಯೂನಿಯನ್ ಏರಿಯಾ ಕಾರ್ಯದರ್ಶಿ ಮಾಲತಿ ಸ್ವಾಗತಿಸಿ, ನಳಿನಿ ಮಂಜೇಶ್ವರ ವಂದಿಸಿದರು. ಶುಭ ಎಸ್ ಮಂಗಲ್ಪಾಡಿ, ಉದಯ ಕುಮಾರಿ ವರ್ಕಾಡಿ, ಹೇಮಾ ಮೀಂಜ, ನಳಿನಿ ಪೈವಳಿಕೆ ನೇತೃತ್ವ ನೀಡಿದರು.