ಆಸ್ತಿ ಪಾಲು ಮಾಡಲಿಲ್ಲ: ವೃದ್ದೆ ತಾಯಿಗೆ ಪುತ್ರನಿಂದ ಆಕ್ರಮಣ
ಹೊಸದುರ್ಗ: ಆಸ್ತಿ ವಿಂಗಡಿಸಿ ನೀಡದ ದ್ವೇಷದಿಂದ ವೃದ್ದೆ ತಾಯಿಗೆ ಕಬ್ಬಿಣದ ಸರಳಿನಿಂದ ತಲೆಗೆ ಬಡಿದು ಗಾಯಗೊಳಿಸಿರುವುದಾಗಿ ದೂರಲಾಗಿದೆ. ಪುತ್ರನ ವಿರುದ್ಧ ನೀಲೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಪೂವಾಲಂಕೈ ಪುತ್ತರಿಯಡ್ಕಂ ಕೆ.ವಿ. ಕಲ್ಯಾಣಿ (70) ನೀಡಿದ ದೂರಿನಂತೆ ಪುತ್ರ ಪ್ರಸಾದ್ (50)ನ ವಿರುದ್ಧ ಕೇಸು ದಾಖಲಿಸ ಲಾಗಿದೆ. ತಲೆಗೆ ಬಡಿಯಲು ಯತ್ನಿಸುತ್ತಿದ್ದ ವೇಳೆ ತಡೆದಾಗ ಕೈಕಾಲುಗಳಿಗೂ, ದೇಹದ ಇತರ ಭಾಗಗಳಿಗೂ ಹೊಡೆದಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.