ಆಸ್ಪತ್ರೆಯಲ್ಲಿ ಮಹಿಳೆಗೆ ಹಾವು ಕಡಿತ
ಪಾಲಕ್ಕಾಡ್: ಜ್ವರ ಬಾಧಿಸಿದ ಮಗಳನ್ನು ಚಿಕಿತ್ಸೆಗಾಗಿ ಕರೆದು ಕೊಂಡು ಹೋದ ತಾಯಿಗೆ ಸರಕಾರಿ ಆಸ್ಪತ್ರೆ ಯಲ್ಲಿ ಹಾವು ಕಡಿದ ಘಟನೆ ನಡೆದಿದೆ.
ಚಿಟ್ಟೂರು ತಾಲೂಕು ಆಸ್ಪತ್ರೆ ಯಲ್ಲಿ ಈ ಘಟನೆ ನಡೆದಿದೆ. ಪಾಲ ಕ್ಕಾಡ್ ಪುದುನಗರ ಕರಿಪ್ಪೋಡ್ ಎಂಬಲ್ಲಿನ ಗಾಯತ್ರಿ ಎಂಬವರಿಗೆ ಹಾವು ಕಡಿದಿದೆ. ಇವರು ನಿನ್ನೆ ಬೆಳಿಗ್ಗೆ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮಹಿಳೆಯರ ವಾರ್ಡ್‌ನಲ್ಲಿ ಕುಳಿತಿದ್ದಾಗ ಅವರಿಗೆ ಹಾವು ಕಡಿದೆ. ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದ.