ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತಲುಪಿದ ಮರುದಿನ ಯುವತಿ ಹೃದಯಾಘಾತದಿಂದ ನಿಧನ
ಹೊಸದುರ್ಗ: ಆಸ್ಪತ್ರೆಯಿಂದ ಬಿಡುಗಡೆ ಗೊಂಡು ಮನೆಗೆ ತಲುಪಿದ ಮರುದಿನ ಯುವತಿ ಹೃದಯಾಘಾತದಿಂದಾಗಿ ಮೃತಪಟ್ಟರು. ವೆಸ್ಟ್ ಎಳೇರಿ ಮುಡಂದನ್ಪಾರ ಪಾಟತ್ತಿಲ್ ಹೌಸ್ ನಿವಾಸಿ ಮನೋಜ್ರ ಪತ್ನಿ ಸ್ವಪ್ನ (37) ಮೃತಪಟ್ಟವರು. ಕಾಞಂಗಾಡ್ ಸ್ಟ್ಯಾಟಿಸ್ಟಿಕ್ಕಲ್ ಕಚೇರಿಯ ಉದ್ಯೋಗಸ್ಥೆಯಾಗಿದ್ದಾರೆ. ಹೃದಯ ಸಂಬಂಧ ಅಸೌಖ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೊನ್ನೆ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತಲುಪಿದ್ದರು. ನಿನ್ನೆ ಬೆಳಿಗ್ಗೆ 10 ಗಂಟೆ ವೇಳೆಗೆ ಎದೆನೋವು ಕಂಡು ಬಂದಿದ್ದು, ಕೂಡಲೇ ವೆಳ್ಳರಿಕುಂಡ್ ಸಹಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿಂದ ಜಿಲ್ಲಾಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ಪತಿ, ಮಕ್ಕಳಾದ ಸನ್ಮಯ, ಮಾಳವಿಕ, ತಾಯಿ ಕಾರ್ತ್ಯಾಯಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.