ಇಂದು ಸಂಜೆ ಡಿವೈಎಫ್‌ಐ ಮಾನವ ಸರಪಳಿ

ಕಾಸರಗೋಡು: ಕೇಂದ್ರ ಸರಕಾರದ ವಿರುದ್ಧ ಡಿವೈಎಫ್‌ಐ ನಡೆಸುವ ಮಾನವ ಸರಪಳಿ ಇಂದು ಸಂಜೆ ೫ ಗಂಟೆಗೆ ನಡೆಯಲಿದೆ. ಕಾಸರಗೋಡು ರೈಲು ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ತಿರುವನಂತಪುರ ರಾಜ್‌ಭವನ್ ತನಕ ಮಾನವ ಸರಪಳಿ ಮುಂದುವರಿಯಲಿದೆ. ಡಿವೈಎಫ್‌ಐ ಅಖಿಲ ಭಾರತ ಅಧ್ಯಕ್ಷ ಎ.ಎ. ರಹೀಂ ಈ ಮಾನವ ಸರಪಳಿಯ ಮೊದಲ ಕೊಂಡಿಯಾಗಿ ಕಾಸರ ಗೋಡಿನಲ್ಲಿ ಭಾಗವಹಿಸಲಿದ್ದಾರೆ. ಸಿಪಿಎಂ ಮತ್ತು ಡಿವೈಎಫ್‌ಐ ಸೇರಿದಂತೆ ಇತರ ಹಲವು ನೇತಾರರು ಇದರ ಕೊಂಡಿಗಳಾ ಗಿರುವರು. ಕಾಸರಗೋಡು ಜಿಲ್ಲೆಯಲ್ಲಿ ಮಾತ್ರವಾಗಿ ಒಂದು ಲಕ್ಷದಷ್ಟು ಕಾರ್ಯಕರ್ತರು ಇದರ ಕೊಂಡಿಗಳಾಗಲಿರುವರು ಎಂದು ಡಿವೈಎಫ್‌ಐ ನೇತಾರರು ತಿಳಿಸಿದ್ದಾರೆ.

You cannot copy contents of this page