ಇಂದು, 4ರಂದು ರಾಜ್ಯದಲ್ಲಿ ಸಂಪೂರ್ಣ ಡ್ರೈಡೇ
ಕಾಸರಗೋಡು: ರಾಜ್ಯದಲ್ಲಿ ಇಂದು ಹಾಗೂ 4ರಂದು ಸಂಪೂರ್ಣ ಡ್ರೈಡೇ ಆಗಿರುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದರಂದು ಖಾಯಂ ಡ್ರೈ ಡೇ ಆಗಿರುವುದು. ಅದಲ್ಲದೆ ೪ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿರುವುದರಿಂದ ಅಂದು ಸಂಪೂರ್ಣ ಮದ್ಯ ನಿಷೇಧ ಹೇರಲಾಗಿದೆ. ಈ ಎರಡು ದಿನ ರಾಜ್ಯದ ಎಲ್ಲಾ ಮದ್ಯ ಮಾರಾಟ ದಂಗಡಿಗಳೂ ಮುಚ್ಚುಗಡೆಗೊಳ್ಳಲಿದೆ. ಇತ್ತೀಚೆಗೆ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಕೇರಳದಲ್ಲಿ ಎರಡು ದಿನ ಮದ್ಯ ನಿಷೇಧ ಹೇರಲಾಗಿತ್ತು. ರಾಜ್ಯದ ಎಲ್ಲಾ ಬಾರ್‌ಗಳು ಹಾಗೂ ಬೆವ್‌ಕೋ ಶಾಪ್‌ಗಳು ೪೮ ಗಂಟೆ ಕಾಲ ಮುಚ್ಚುಗಡೆಗೊಂಡಿದ್ದವು. ಮತದಾನದ ಪೂರ್ವಭಾವಿಯಾಗಿ ಎಪ್ರಿಲ್ 24ರಂದು ಸಂಜೆ 6 ಗಂಟೆಗೆ ಮುಚ್ಚುಗಡೆಗೊಂಡ ಮದ್ಯದಂಗಡಿಗಳು ಮತದಾನ ಮುಗಿದ ಬಳಿಕ 26ರಂದು ಸಂಜೆ 6 ಗಂಟೆಗೆ ತೆರೆಯಲಾಗಿತ್ತು.