ಇಂಧನ ಸೋರಿಕೆ: ಬಾಹ್ಯಾಕಾಶ ಯಾನ  ಮತ್ತೆ ಮುಂದೂಡಿಕೆ

ನವದೆಹಲಿ: ಭಾರತದ ಎರಡನೇ ಗಗನಯಾತ್ರಿ ಶುಭಾಂಶು ಶುಕ್ಲಾರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಆಕ್ಸಿಯಮ್-೪ ಮಿಷನ್‌ನನ್ನು ಮತ್ತೆ ಮುಂದೂಡಲಾಗಿದೆ.

ಈ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿರುವ ಸ್ಪೇಸ್ ಎಕ್ಸ್ ಕಂಪೆನಿಯು ಉಡಾವಣೆಗೆ ಮೊದಲು ನಡೆಸಿದ ಪೋಸ್ಟ್ ಸ್ವ್ಯಾಟಿಕ್ ಫೈರ್ ಬೂಸ್ಟರ್ ತಪಾಸಣೆ ಸಮಯದಲ್ಲಿ ದ್ರವ ಆಮ್ಲಜನಕ ಸೋರಿಕೆ ಕಂಡು ಬಂದಿದೆ ಎಂದೂ ಆ ಕಾರಣದಿಂದಾಗಿ ಆಕ್ಸಿಯಮ್-೪ ಮಿಷನ್ ಯಾನವನ್ನು ಮುಂದೂಡಬೇಕಾಗಿ ಬಂದಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಸುರಕ್ಷತೆ ವಿಷಯದಲ್ಲಿ ನಾವು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಬೂಸ್ಟರ್ ತಪಾಸಣೆ ಸಮಯದಲ್ಲಿ ದ್ರವ ಆಮ್ಲ ಜನಕ ಸೋರಿಕೆ ಕಂಡು ಬಂದಿದೆ. ಆದ್ದ ರಿಂದ ಉಡಾವಣೆಯನ್ನು ಮುಂದೂಡ ಲಾಗಿದೆ ಎಂದು ಸ್ಪೇಸ್ ಎಕ್ಸ್ ತನ್ನ ಅಧಿ ಕೃತ ಹೇಳಿಕೆಯಲ್ಲಿ ತಿಳಿಸಿದೆ. ಆಕ್ಸಿಯಮ್-೪ ಮಿಷನ್‌ನ ಉಡಾವಣೆಯನ್ನು ಮುಂದೂಡುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಮುಂದಿನ ಉಡಾವಣಾ ದಿನಾಂಕವನ್ನು ಇನ್ನೂ ನಿರ್ಧರಿಸಲಾಗಿಲ್ಲ.

ಈ ಕಾರ್ಯಾಚರಣೆಯು ಹೂಸ್ಟನ್ ಮೂಲದ ಆಕ್ಸಿಯಮ್ ಸ್ಪೇಸ್ ಮತ್ತು ಯು.ಎಸ್. ಬಾಹ್ಯಾಕಾಶ ಸಂಸ್ಥೆಯ ನಾಸಾ ನಡುವಿನ ಪಾಲುದಾರಿ ಕೆಯಾಗಿದೆ. ಇದನ್ನು ‘ಮಿಷನ್ ಗಂಗಾ’ ಎಂದೂ ಕರೆಯಲಾಗುತ್ತಿದೆ. ಇದರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾ ಣಕ್ಕೆ ಸಾಗುವ ಸಿಬ್ಬಂದಿಗಳು ಅಲ್ಲಿ 14 ದಿನಗಳ ಕಾಲ ಇರಲಿದ್ದಾರೆ. 1984ರಲ್ಲಿ  ರಾಖೇಶ್ ಶರ್ಮಾ ರಷ್ಯಾದ ಸೋಯುಜ್ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯನಾಗಿದ್ದರು. ಶುಭಾಂಶು ಶುಕ್ಲಾ ಬಾಹ್ಯಾಕಾಶ ಪ್ರಮಾಣ ನಡೆಸಿದರೆ ಅದು ಅಲ್ಲಿಗೆ ಪ್ರಯಾಣ ನಡೆಸುವ ಎರಡನೇ ಭಾರತೀಯನಾಗಲಿದ್ದಾರೆ.

ಆಕ್ಸಿಯಮ್-೪ ಮಿಷನ್ ಪೈಲೆಟ್ ಆಗಿ ಗ್ರೂಪ್ ಕ್ಯಾಪ್ಟನ್ ಶುಕ್ಲಾ ಇತರ ಮೂವರು ಗಗನಯಾತ್ರಿಕರೊಂದಿಗೆ ಗಗನಯಾತ್ರೆ ನಡೆಸಲಿದ್ದಾರೆ.

You cannot copy contents of this page