ಇಕ್ಕೇರಿ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ವಾರ್ಷಿಕೋತ್ಸವ 18 ರಿಂದ
ಬದಿಯಡ್ಕ: ಇಕ್ಕೇರಿ ಶ್ರೀ ಶಂಕರನಾರಾಯಣ ದೇವಸ್ಥಾನದ ವಾರ್ಷಿಕೋತ್ಸವ 18, 19ರಂದು ನಡೆಯಲಿದೆ. 18ರಂದು ಪೂರ್ವಾಹ್ನ ಗಣಪತಿ ಹೋಮ, ಶಂಕರನಾರಾಯಣ ಹವನ, ಶತರುದ್ರಾಭಿಷೇಕ, ನವಕಾ ಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಅಪರಾಹ್ನ ೪.೩೦ಕ್ಕೆ ಕರಿಂಬಿಲ ಲಕ್ಷ್ಮಣಪ್ರಭು ಮತ್ತು ಬಳಗದವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ ೬.೪೦ಕ್ಕೆ ದೀಪಾರಾಧನೆ, ರಾತ್ರಿ ೮ಕ್ಕೆ ಕಾರ್ತಿಕ ಪೂಜೆ, ೧೯ರಂದು ಶ್ರೀ ಧೂಮಾವತಿ ಪರಿವಾರ ದೈವಗಳ ಕೋಲ ಜರಗಲಿದೆ. ಎಪ್ರಿಲ್ ೧೧ರ ಪ್ರತಿಷ್ಠಾದಿನದಂದು ಶ್ರೀ ದೈವಗಳಿಗೆ ತಂಬಿಲ, ಶ್ರೀ ಶಂಕರನಾರಾಯಣ ದೇವರಿಗೆ ಏಕಾದಶ ರುದ್ರಾಭಿಷೇಕ ಜರಗಲಿದೆ.
ಇಕ್ಕೇರಿ ಕ್ಷೇತ್ರ ರಸ್ತೆ ಶ್ರಮದಾನ, ನಾಮಫಲಕ ಅಳವಡಿಕೆ
ದೇವಸ್ಥಾನದ ರಸ್ತೆಯ ಎರಡೂ ಬದಿಯ ಕಾಡುಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು. ಶ್ರೀ ಕ್ಷೇತ್ರದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸ್ಥಳೀಯ ಕಾರ್ಯಕರ್ತರು ಶ್ರಮದಾನಗೈದರು. ಇದೇ ವೇಳೆ ಶ್ರೀ ಕ್ಷೇತ್ರಕ್ಕೆ ತೆರಳುವ ರಸ್ತೆ ಬದಿಯಲ್ಲಿ ನಾಮಫಲಕವನ್ನು ಅಳವಡಿಸಲಾಯಿತು. ಸೇವಾ ಸಮಿತಿ ಅಧ್ಯಕ್ಷ ಮೈರ್ಕಳ ನಾರಾಯಣ ಭಟ್, ಕಾರ್ಯದರ್ಶಿ ಉದನೇಶ್ವರ ಇಕ್ಕೇರಿ, ಬಾಲಕೃಷ್ಣ ಭಟ್ ಇಕ್ಕೇರಿ, ಪ್ರಧಾನ ಅರ್ಚಕ ನಾರಾಯಣ ಭಟ್, ಪ್ರಕಾಶ್ ಇಕ್ಕೇರಿ, ಈಶ್ವರ ನಾಯ್ಕ್, ಶಿವಪ್ರಸಾದ್ ಮೈರ್ಕಳ, ಶಶಾಂಕ ಪಾಲ್ಗೊಂಡಿದ್ದರು.