ಇಚ್ಲಂಗೋಡು ಪಚ್ಚಂಬಳ ಉರೂಸ್ ಫೆ. ೪ರಿಂದ

ಬಂದ್ಯೋಡು: ಇಚ್ಲಂಗೋಡು ಪಚ್ಚಂಬಳ ಬಾವಫಕೀರ್ ಹಳ್‌ರಮಿ  ತಂಙಳ್‌ರ ಹೆಸರಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಉರೂಸ್ ೨೦೨೪ ಫೆಬ್ರವರಿ ೪ರಿಂದ ೧೮ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಇದರ ಅಂಗವಾಗಿ ಮಖಾಂ ಸಿಯಾರತ್ ನಡೆಸಲಾಯಿತು. ಜಮಾಅತ್ ಅಧ್ಯಕ್ಷ ಅನ್ಸಾರ್ ಶೆರೂಲ್ ಧ್ವಜಾರೋಹಣ ನಡೆಸಿದರು.ಪ್ರಾರ್ಥನೆಗೆ ಖತೀಬ್ ಇರ್ಶಾದ್ ಫೈಸಿ ನೇತೃತ್ವ ನೀಡಿದರು. ಮುದರಿಸ್ ಮುಹಿಯುದ್ದೀನ್ ಸಅದಿ ಚೇರೂರು, ಅಡ್ವೈಸರ್ ನ್ಯಾಯವಾದಿ ಮುಹಮ್ಮದ್ ಅನಸ್, ಜಮಾಅತ್ ಸೆಕ್ರೆಟರಿ ಮಹಮೂದ್ ಕುಟ್ಟಿ ಹಾಜಿ, ಕೋಶಾಧಿಕಾರಿ ಫಾರೂಕ್ ಪಚ್ಚಂಬಳ, ಉರೂಸ್ ಸಮಿತಿ ಕನ್ವೀನರ್ ಮೊಯ್ದೀನ್ ಕುಂಞಿಹಮ್ಮದ್ ಹಾಜಿ, ಪ್ರಚಾರ ಸಮಿತಿ ಕನ್ವೀನರ್ ಹಸನ್ ಇಚ್ಲಂಗೋಡು ಮಾತನಾಡಿದರು.

RELATED NEWS

You cannot copy contents of this page