ಇತಿಹಾಸ ಸೃಷ್ಟಿಸುತ್ತಾ ಮುಂದುವರಿಯುತ್ತಿರುವ ಚಿನ್ನದ ದರ: ಇಂದು ಗ್ರಾಂಗೆ 1480 ರೂ. ಹೆಚ್ಚಳ
ತಿರುವನಂತಪುರ: ರಾಜ್ಯದಲ್ಲಿ ಚಿನ್ನದ ಬೆಲೆ ಇತಿಹಾಸದಲ್ಲೇ ಪ್ರಥಮವಾಗಿ ಪವನ್ಗೆ 69,000 ರೂ. ದಾಟಿದೆ. 70,000 ರೂ.ಗೆ ಇನ್ನು 40 ರೂಪಾಯಿಯಷ್ಟೇ ಕಡಿಮೆಯಿದೆ. ಇಂದು ಬೆಳಿಗ್ಗೆ 1480 ರೂ. ಗ್ರಾಂನಲ್ಲಿ ಹೆಚ್ಚಾಗಿ ಪವನ್ಗೆ 69,960 ರೂ.ಗೆ ತಲುಪಿದೆ. ನಿನ್ನೆ 8560 ರೂ. ಗ್ರಾಂಗೆ ಹಾಗೂ 68,480 ರೂ. ಎಂಬ ದಾಖಲೆ ಇವತ್ತು ಮುರಿದಿದೆ.
ಕಳೆದ ಮೂರು ದಿನದ ಮಧ್ಯೆ ರಾಜ್ಯದಲ್ಲಿ 1 ಪವನ್ ಚಿನ್ನಕ್ಕೆ 4160 ರೂ. ಹೆಚ್ಚಾಗಿದೆ. ಗ್ರಾಂ ಲೆಕ್ಕದಲ್ಲಿ 520 ರೂ. ಏರಿದೆ. ಮಜೂರಿ ಹಾಗೂ ಜಿಎಸ್ಟಿ, ಹಾಲ್ಮಾರ್ಕ್ ಶುಲ್ಕ ಸೇರಿದಾಗ ಬೆಲೆಯೇರಿಕೆಯ ಹೊರೆ ಇದಕ್ಕೂ ಹೆಚ್ಚಾಗಲಿದೆ ಎಂಬುದು ಗ್ರಾಹಕರು ಹಾಗೂ ವ್ಯಾಪಾರಿಗಳನ್ನು ಏಕ ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿಸಿದೆ.
ಯುಎಸ್- ಚೈನಾ ವ್ಯಾಪಾರ ಯುದ್ಧ ದಿನಂಪ್ರತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಯುಎಸ್ ಡಾಲರ್ 2022ರ ಬಳಿಕ ಅತ್ಯಂತ ಮೌಲ್ಯ ಕುಸಿತ ಉಂಟಾಗಿರುವುದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಹೆಚ್ಚಲು ಕಾರಣವಾಗಿದ್ದು, ಇದರ ಪ್ರತಿಫಲನ ರಾಜ್ಯದಲ್ಲೂ ಕಂಡು ಬಂದಿದೆ. ಶೇರು, ಸಾಲಪತ್ರ ಮಾರುಕಟ್ಟೆಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷಿತ ಠೇವಣಿ ಎಂಬ ನೆಲೆಯಲ್ಲಿ ಚಿನ್ನದ ಠೇವಣಿ ಯೋಜನೆಗಳಿಗೆ ಜನರು ತಿರುಗಿರುವುದು ಈ ಏರಿಕೆಗೆ ಇನ್ನೊಂದು ಕಾರಣವಾಗಿದೆ. ಯುಎಸ್ ಟ್ರಷರಿಯಿಂದ ಬೃಹತ್ ಪ್ರಮಾಣದಲ್ಲಿ ಚೈನೀಸ್ ಠೇವಣಿಯನ್ನು ಹಿಂತೆಗೆಯುವ ಭೀತಿ ಠೇವಣಿದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಟ್ರಷರಿ ದುರ್ಬಲ ಗೊಳ್ಳುತ್ತಿರುವುದು ಯುಎಸ್ ಸರಕಾರದ ಆರ್ಥಿಕ ಸ್ಥಿತಿ ಕೂಡಾ ಹದಗೆಡಲು ಕಾರಣವಾಗಲಿದೆ. ಚಿನ್ನದ ದರ ರಾಜ್ಯದಲ್ಲಿ ಇನ್ನೂ ಹೆಚ್ಚಬಹುದೆಂಬ ನಿರೀಕ್ಷೆ ಇದೆ.