ಇನ್ನೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗುವುದು ಶತಸಿದ್ಧ-ಆದರ್ಶ್ ಬಿ.ಎಂ
ವರ್ಕಾಡಿ: ಪಂಚಾಯತ್ ಬಿಜೆಪಿ ಕಾರ್ಯಕರ್ತರ ಸಮಾವೇಶ ವನ್ನು ಪಕ್ಷದ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ ಉದ್ಘಾಟಿಸಿದರು. ಕೇರಳದ ಹೊರಗೆ ಸೀತಾರಾಮ ಯೆಚ್ಚೂರಿಯ ಕೈ ಹಿಡಿದು ಪ್ರಚಾರ ಮಾಡುವ ರಾಹುಲ್ ಗಾಂಧಿ ತಾನು ಸ್ಪರ್ಧಿಸುವ ಕ್ಷೇತ್ರದಲ್ಲಿ ಸಿಪಿಎಂ ಎದುರಾಳಿ ಪಕ್ಷವಾಗಿರುವುದು ಹಾಸ್ಯಾಸ್ಪದ ಎಂದವರು ನುಡಿದರು. ದೇಶದಲ್ಲಿ ಇನ್ನೊಮ್ಮೆ ನರೇಂದ್ರಮೋದಿ ಪ್ರಧಾನಿಯಾಗುವುದು ಶತಸಿದ್ಧ ಎಂದವರು ನುಡಿದರು.
ಮುಖಂಡರಾದ ಹರಿಶ್ಚಂದ್ರ ಎಂ, ತುಳಸಿ ಕುಮಾರಿ, ರಕ್ಷಣ್ ಅಡೆಕ್ಕಳ, ಜಗದೀಶ್ ಚೆಂಡ್ಲಾ, ಧೂಮಪ್ಪ ಶೆಟ್ಟಿ, ಯತಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ಭಾಸ್ಕರ್ ಪೊಯ್ಯೆ ಸ್ವಾಗತಿಸಿ, ರವಿರಾಜ್ ವಂದಿಸಿದರು.