ಇನ್‌ಸ್ಟಾಗ್ರಾಂನಲ್ಲಿ ಪರಿಚಯಗೊಂಡ ಯುವಕನನ್ನು ಹುಡುಕಿ ಬಂದ ಬಾಲಕಿ ಪೊಲೀಸ್ ವಶಕ್ಕೆ
ಕಾಸರಗೋಡು: ಇನ್‌ಸ್ಟಾಗ್ರಾಂ ನಲ್ಲಿ ಪರಿಚಯಗೊಂಡ ಪ್ರಿಯತಮ ನನ್ನು ಹುಡುಕಿಕೊಂಡು ಬಂದ 17ರ ಹರೆಯದ ಬಾಲಕಿಯನ್ನು ರೈಲು ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ. ರಾಜಪುರಂ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ 17ರ ಹರೆಯದ ಬಾಲಕಿ ಈ ರೀತಿ ಪೊಲೀಸರ ವಶಕ್ಕೊಳಗಾದವಳು. ಈಕೆ ನಾಪತ್ತೆಯಾಗಿರುವುದಾಗಿ ಮನೆಯವರು ರಾಜಪುರಂ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ಆಕೆಗಾಗಿ ಶೋಧ ಆರಂಭಿಸಿರುವಂತೆಯೇ ಹೊಸದುರ್ಗ ರೈಲು ನಿಲ್ದಾಣದಲ್ಲ್ಲಿ ಆಕೆಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಬಳಿಕ ಬಾಲಕಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ಹೆತ್ತವರ ಜೊತೆ ಬಿಟ್ಟುಕೊಡಲಾಯಿತು.