ಇರಿಯಣ್ಣಿ ಪರಿಸರದಲ್ಲಿ ಮತ್ತೆ ಆತಂಕ: ಗೂಡಿನಲ್ಲಿದ್ದ ಜರ್ಮನ್ ಶಫರ್ಡ್ ನಾಯಿ ಚಿರತೆ ದಾಳಿಗೆ ಬಲಿ
ಬೋವಿಕ್ಕಾನ: ಅಲ್ಪ ದಿನಗಳ ಬಿಡುವಿನ ಬಳಿಕ ಮುಳಿಯಾರು ಪಂಚಾಯತ್‌ನ ಇರಿಯಣ್ಣಿಯಲ್ಲಿ ಮತ್ತೆ ಚಿರತೆಯ ದಾಳಿ ನಡೆದಿದೆ. ಇಂದು ಮುಂಜಾನೆ ೩ ಗಂಟೆ ವೇಳೆ ಮನೆ ಅಂಗಳಕ್ಕೆ ತಲುಪಿದ ಚಿರತೆ ಸಾಕು ನಾಯಿಯನ್ನು ಕೊಂದು ಕೊಂಡೊಯ್ದಿದೆ. ಇರಿಯಣ್ಣಿ ಬಳಿಯ ಓಲತ್ತುಕಯ ನಿವಾಸಿ ಗೋಪಾಲನ್ ನಾಯರ್‌ರ ೪ ವರ್ಷ ಪ್ರಾಯದ ಜರ್ಮನ್ ಶಫಾರ್ಡ್ ವಿಭಾಗಕ್ಕೊಳ ಪಟ್ಟ ನಾಯಿ ಚಿರತೆಗೆ ಬಲಿಯಾಗಿದೆ. ಕಬ್ಬಿಣದ ಗೂಡನ್ನು ಕೆಡಹಿದ ಬಳಿಕ ನಾಯಿಯನ್ನು ಚಿರತೆ ಹಿಡಿದಿದೆ. ಇಂದು ಮುಂಜಾನೆ 3 ಗಂಟೆ ವೇಳೆ ಈ ಘಟನೆ ನಡೆದಿದೆ. ಸೋಲಾರ್ ಬೇಲಿಯ ಅಡಿಯಲ್ಲಾಗಿ ನುಸುಳಿದ ಚಿರತೆ ಮನೆಯಂಗಳಕ್ಕೆ ತಲುಪಿದೆ. ಬಳಿಕ ಅಲ್ಲಿದ್ದ ಕಬ್ಬಿಣದ ಗೂಡಿನ ಅಡಿಭಾಗವನ್ನು ಕೆಡಹಿ ನಾಯಿಯನ್ನು ಹಿಡಿದಿದೆ. ಚಿರತೆಯ ಹಿಡಿತದಿಂದ ತಪ್ಪಿಸಿಕೊಂಡು ಓಡಿದ ನಾಯಿ ಮನೆಯ ಸಿಟೌಟ್‌ನಲ್ಲಿ ಅಡಗಿದರೂ ಜೀವಾಪಾಯದಿಂದ ಪಾರಾಗಲು ಅದಕ್ಕೆ ಸಾಧ್ಯವಾಗಲಿಲ್ಲ. ಚಿರತೆ ಹಾಗೂ ನಾಯಿಯಕಾಲಿನ ಹೆಜ್ಜೆಗಳು ಸಿಟೌಟ್ ಹಾಗೂ ಅಂಗಳದಲ್ಲಿ ಕಂಡುಬಂದಿದೆ. ನಾಯಿಯನ್ನು ಕೊಂದ ಬಳಿಕ ಅಡಿಕೆ ತೋಟದ ಮೂಲಕ ಅದನ್ನು ಚಿರತೆ ಎಳೆದು ಕೊಂಡೊಯ್ದ ಗುರುತು ಕೂಡಾ ಕಂಡುಬಂದಿದೆ. ವಿಷಯ ತಿಳಿದು ಎನ್.ವಿ. ಸತ್ಯನ್‌ರ ನೇತೃತ್ವದಲ್ಲಿ ಆರ್‌ಆರ್‌ಟಿ ತಂಡ ಸ್ಥಳಕ್ಕೆ ತಲುಪಿ ಶೋಧ ಆರಂಭಿಸಿದೆ. ಈ ಪ್ರದೇಶದಲ್ಲಿ ಈ ಹಿಂದೆಯೂ ಚಿರತೆಯ ಹಾವಳಿ ಉಂಟಾಗಿತ್ತು.
ಆದ್ದರಿಂದ ಇಲ್ಲಿ ಕ್ಯಾಮರಾ ಅಳಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಕೆಲವು ದಿನಗಳ ಹಿಂದೆ ಓಲತ್ತುಕಯದ ಇನ್ನೊಂದು ಮನೆಗೂ ಚಿರತೆ ತಲುಪಿತ್ತು.
ಅಂದು ಗೂಡು ಕೆಡಹಿ ನಾಯಿಯನ್ನು ಹಿಡಿಯಲು ಪ್ರಯತ್ನಿಸಿದರೂ ಚಿರತೆಗೆ ಸಾಧ್ಯವಾಗಿರಲಿಲ್ಲ. ಚಿರತೆಯ ದಾಳಿಯಿಂದ ನಾಯಿಯ ದೇಹದಲ್ಲಿ ಗಾಯಗಳುಂಟಾಗಿತ್ತು.